ಅಖಿಲೇಶ್ ಯಾದವ್- ಮುಲಾಯಂ ಸಿಂಗ್ ಯಾದವ್ (ಸಂಗ್ರಹ ಚಿತ್ರ)
ಲಖನೌ: ಮಹತ್ವದ ಬೆಳವಣಿಗೆಯೊಂದರಲ್ಲಿ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಸಿಎಂ ಅಖಿಲೇಶ್ ಯಾದವ್ ಅವರ ಉಚ್ಚಾಟನೆ ಆದೇಶವನ್ನು ವಾಪಸ್ ಪಡೆದಿದ್ದಾರೆ.
ಡಿ.31 ರಂದು ಅಖಿಲೇಶ್ ಯಾದವ್ ತಮ್ಮ ಬೆಂಬಲಿಗರ ಸಭೆ ನಡೆಸಿದ್ದರು. ನಂತರ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಅವರೊಂದಿಗೆ ಮುಲಾಯಂ ಸಿಂಗ್ ಯಾದವ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು. ಸಭೆಯ ನಂತರ ಮುಲಾಯಂ ಸಿಂಗ್ ಯಾದವ್ ಅಖಿಲೇಶ್ ಯಾದವ್ ಹಾಗೂ ರಾಮ್ ಗೋಪಾಲ್ ಯಾದವ್ ಉಚ್ಚಾಟನೆಯನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಖಿಲೇಶ್ ಯಾದವ್ ಅವರನ್ನು ಮುಲಾಯಂ ಸಿಂಗ್ ಪಕ್ಷದಿಂದ ಉಚ್ಚಾಟನೆ ಮಾಡಿದ ಬಳಿಕ ಉತ್ತರ ಪ್ರದೇಶದಲ್ಲಿ ಹಲವು ಅಚ್ಚರಿಯ ರಾಜಕೀಯ ಬೆಳವಣಿಗೆಗಳು ನಡೆದಿತ್ತು.
ಉಚ್ಚಾಟನೆಗೊಂಡ ಬಳಿಕ ಅಖಿಲೇಶ್ ಯಾದವ್ ನಡೆಸಿದ್ದ ಬೆಂಬಲಿಗರ ಸಭೆಯಲ್ಲಿ ಒಟ್ಟು 207 ಶಾಸಕರು, 53 ಅಭ್ಯರ್ಥಿಗಳು(ವಿಧಾಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳು) 37 ಎಂಎಲ್ ಸಿಗಳು ಭಾಗವಹಿಸಿದ್ದರು. ಅಖಿಲೇಶ್ ಯಾದವ್ ಅವರೊಂದಿಗೆ ಮುಲಾಯಂ ಸಿಂಗ್ ಯಾದವ್ ನಿವಾಸಕ್ಕೆ ತೆರಳುವುದಕ್ಕೂ ಮುನ್ನ ಅಜಂ ಖಾನ್ ಮುಲಾಯಂ ಸಿಂಗ್ ಅವರೊಂದಿಗೆ 1 ಗಂಟೆಗಳ ಕಾಲ ಚರ್ಚಿಸಿದ್ದರು. ಅಖಿಲೇಶ್ ಯಾದವ್ ಅವರ ಉಚ್ಚಾಟನೆಯನ್ನು ವಾಪಸ್ ಪಡೆದಿರುವ ಬಗ್ಗೆ ಎಸ್ ಪಿ ರಾಜ್ಯಾಧ್ಯಕ್ಷ ಶಿವ್ ಪಾಲ್ ಯಾದವ್ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics