ದೇಶ

ಅನಂತಪುರದಲ್ಲೂ ಮುಜುಗರಕ್ಕೊಳಗಾದ ರಾಹುಲ್

Manjula VN

ಬದ್ಲಾಪಲ್ಲಿ: ಈ ಹಿಂದಷ್ಟೇ ಬೆಂಗಳೂರಿಗೆ ಆಗಮಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಮೋದಿಯನ್ನು ಟೀಕಿಸಲು ಹೋಗಿ ತಾವೇ ಮುಜುಗರ ಅನುಭವಿಸಿದ್ದು ಎಲ್ಲರಿಗೂ ನೆನಪಿರಬಹುದು. ಇದೀಗ ಅದೇ ರೀತಿಯ ರಾಹುಲ್ ಮುಜುಗರಕ್ಕೊಳಗಾಗಿರುವ ಸನ್ನಿವೇಶ ಅನಂತಪುರದಲ್ಲೂ ಮಂಗಳವಾರ ನಡೆದಿದೆ.

ನರೇಗಾ ಯೋಜನೆ ಜಾರಿಯಾಗಿ ಇಂದಿಗೆ 10 ವರ್ಷವಾದ ಹಿನ್ನೆಲೆಯಲ್ಲಿ ಅನಂತಪುರ ಜಿಲ್ಲೆಯ ಬಂದ್ಲಾಪಲ್ಲಿಯಲ್ಲಿ ಅಲ್ಲಿನ ಕಾಂಗ್ರೆಸ್ ನಾಯಕರು ಮೋದಿಯವರನ್ನು ಟೀಕಿಸಿ ರಾಹುಲ್ ಗಾಂಧಿಯವರನ್ನು ಮೆಚ್ಚಿಸುವ ಸಲುವಾಗಿ ರೋಡ್ ಶೋವೊಂದನ್ನು ಆಯೋಜಿಸಿದ್ದರು. ರೋಡ್ ಶೋದಲ್ಲಿ ರಾಹುಲ್ ಗಾಂಧಿಯವರು ಭಾಗವಹಿಸಿದ್ದರು.

ರಾಹುಲ್ ಗಾಂಧಿ ಅವರು ಅನಂತಪುರ ಜಿಲ್ಲೆಗೆ ಇದು ಎರಡನೇ ಭೇಟಿ ನೀಡಿದ್ದು, ಯುಪಿಎ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಯೋಜನೆಯ ಯಶಸ್ಸಿನ ಬಗ್ಗೆ ಜನರ ಅಭಿಪ್ರಾಯ ಕೇಳಿ ರಾಹುಲ್ ಅವರನ್ನು ಮೆಚ್ಚಿಸಲು ಅಲ್ಲಿನ ನಾಯಕರು ಯೋಜನೆ ರೂಪಿಸಿದ್ದರು. ಇದರಂತೆ. ರಾಹುಲ್ ಗಾಂಧಿಯವರು ಕೇಳುವ ಪ್ರಶ್ನೆಯನ್ನು ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಎನ್. ರಘುವೀರ ರೆಡ್ಡಿ ಅವರು ಜನರಿಗೆ ತರ್ಜುಮೆ ಮಾಡುತ್ತಿದ್ದರು. ರೋಡ್ ಶೋವೊಂದು ಪ್ರಶ್ನಾವಳಿ ವಿಭಾಗದಂತೆ ಕಂಡುಬಂದಿತ್ತು.

ಈ ವೇಳೆ ರಾಹುಲ್ ಗಾಂಧಿಯವರು ಸ್ಥಳದಲ್ಲಿ ನಿಂತಿದ್ದ ಮಹಿಳೆಯೊಬ್ಬರನ್ನು ಮೋದಿಯವರು ನರೇಗಾ ಯೋಜನೆಯನ್ನು ಸಮಯ ವ್ಯರ್ಥ ಯೋಜನೆಯೆಂದು ಹೇಳುತ್ತಾರೆ. ಇದನ್ನು ನೀವು ಒಪ್ಪುತ್ತೀರಾ ಎಂದು ಕೇಳಿದರು. ಈ ಪ್ರಶ್ನೆಯನ್ನು ರಘುವೀರ ರೆಡ್ಡಿ ಅವರು ತರ್ಜುಮೆ ಮಾಡಿ ಮಹಿಳೆಗೆ ಹೇಳಿದರು. ಇದಕ್ಕುತ್ತರಿಸಿದ ಮಹಿಳೆ, ಹೌದು ಸ್ವಾಮಿ. ಇದು ಸಮಯ ವ್ಯರ್ಥ ಯೋಜನೆಯೇ...ನಂತರ ರಘುವೀರ್ ಅವರು ಸಂತಸ ಪಟ್ಟು ಮಹಿಳೆಯ ಪ್ರತಿಕ್ರಿಯೆಯನ್ನು ರಾಹುಲ್ ಕೇಳಿಸಿಕೊಳ್ಳುವಂತೆ ಮಾಡಲು ಪ್ರಯತ್ನ ಪಟ್ಟರು. ನಂತರ ಮತ್ತೆ ಪ್ರತಿಕ್ರಿಯೆ ನೀಡಿದ ಮಹಿಳೆ...ಅಯ್ಯಾ...ಇದು ಸಮಯ ವ್ಯರ್ಥ ಎಂಬುದು ನಿಮಗೂ ತಿಳಿದಿದೆ ಅಲ್ಲವೇ...ಎಂದು ಹೇಳಿದಳು.

ಯೋಜನೆ ಕೃಷಿ ಕಾರ್ಮಿಕರಿಗೆ ಉಪಯೋಗಕಾರಿಯಾಗಿಲ್ಲವೇ ಎಂದು ರಾಹುಲ್ ಮತ್ತೆ ಮಹಿಳೆಯನ್ನು ಪ್ರಶ್ನಿಸಿದಾಗ ಮಹಿಳೆ ಯೋಜನೆ ಉಪಯೋಗಕವಾಗಿದೆ ಅದರೆ ಕೃಷಿ ಕಾರ್ಮಿಕರಿಗಲ್ಲ ಎಂದು ಹೇಳಿದಳು. ನಂತರ ಮಹಿಳೆಯ ಪ್ರತಿಕ್ರಿಯೆ ಕಂಡ ರಘುವೀರ ರೆಡ್ಡಿ ಅವರು ವಿಷಯವನ್ನು ಬದಲಾಯಿಸಿ ರಾಹುಲ್ ಗಾಂಧಿಯವರ ಗಮನವನ್ನು ಬೇರೆಡೆ ಹರಿಯಲು ಪ್ರಯತ್ನಿಸಿದರು.

SCROLL FOR NEXT