ಮೈಕ್ರೋಸಾಫ್ಟ್ ನಿಂದ ವೆಲ್ಡರ್ ಮಗನಿಗೆ 1.2 ಕೋಟಿ ಜಾಬ್ ಆಫರ್! 
ದೇಶ

ವೆಲ್ಡರ್ ಪುತ್ರನಿಗೆ ಮೈಕ್ರೋಸಾಫ್ಟ್ ನಿಂದ ರೂ.1.2 ಕೋಟಿ ಮೊತ್ತದ ಜಾಬ್ ಆಫರ್

ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಬಿಟೆಕ್ ಓದುತ್ತಿರುವ ವಿದ್ಯಾರ್ಥಿಯ ಬುದ್ಧಿವಂತಿಕೆಯನ್ನು ಗುರ್ತಿಸಿರುವ ಅಮೆರಿಕ ಪ್ರತಿಷ್ಟಿತ ಮೈಕ್ರೋಸಾಫ್ಟ್ ಕಂಪನಿ ಈ ಯುವಕನಿಗೆ...

ಪಾಟ್ನಾ; ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಬಿಟೆಕ್ ಓದುತ್ತಿರುವ ವಿದ್ಯಾರ್ಥಿಯ ಬುದ್ಧಿವಂತಿಕೆಯನ್ನು ಗುರ್ತಿಸಿರುವ ಅಮೆರಿಕ ಪ್ರತಿಷ್ಟಿತ ಮೈಕ್ರೋಸಾಫ್ಟ್ ಕಂಪನಿ ಇದೀಗ ಈ ಯುವಕನಿಗೆ ರು.1.2 ಕೋಟಿ ಸಂಪಾದಿಸುವ ಉದ್ಯೋಗಾವಕಾಶವೊಂದನ್ನು ನೀಡಿದೆ.

ವಾತ್ಸಲ್ಯ ಸಿಂಗ್ ಚೌಹ್ಹಾಣ್ (21) ಯುವಕನೇ ಪ್ರತಿಷ್ಠಿತ ಕಂಪನಿಯಿಂದ ಉದ್ಯೋಗಾವಕಾಶ ಪಡೆದಿರುವ ಯುವಕನಾಗಿದ್ದು, ಈತ ಸಂಹೌಲಿ ಗ್ರಾಹದ ಯುವಕನಾಗಿದ್ದಾನೆ. ಈತನ ತಂದೆ ವೆಲ್ಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 6 ಸಹೋದರ ಹಾಗೂ ಸಹೋದರಿಯರನ್ನು ಹೊಂದಿರುವ ಈತ ಇಲ್ಲಿಯವರೆಗೂ ವಿದ್ಯಾಭ್ಯಾಸ ಮಾಡಿರುವುದೇ ದೊಡ್ಡ ಸಾಹಸ ಎಂದು ಹೇಳಬಹುದು.

ಬಿಹಾರದ ಹಿಂದಿ ಮಾಧ್ಯಮ ಶಾಲೆಯಲ್ಲಿ ವ್ಯಾಸಾಂಗ್ ಮಾಡಿದ ಈತ ಇದೀಗ ಖರಗ್ ಪುರದ ಐಐಠಿಯಲ್ಲಿ ಬಿಟೆಕ್ ಅಂತಿಮ ವರ್ಷ ವ್ಯಾಸಾಂಗ ಮಾಡುತ್ತಿದ್ದಾನೆ. ದ್ವಿತೀಯ ಪಿಯುಸಿಯಲ್ಲಿ ಶೇ.75ರಷ್ಟು ಅಂಕ ಪಡೆದ ಈತ, ಕೋಟಾ ಮೂಲಕ ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ ಪ್ರವೇಶ ಪಡೆದಿದ್ದ. ನಂತರ ಪ್ರವೇಶ ಪರೀಕ್ಷೆಯೊಂದರಲ್ಲಿ 382 ಅಂಕಗಳನ್ನು ಪಡೆದಿದ್ದ. ನಂತರ ಖರಗ್ಪುರದ ಐಐಟಿಯಲ್ಲಿ ತನ್ನ ವ್ಯಾಸಾಂಗವನ್ನು ಮುಂದುವರೆಸಿದ್ದ.

ಇದೀಗ ಈತನ ಬುದ್ಧಿವಂತಿಕೆ ಹಾಗೂ ಪ್ರತಿಭೆಯನ್ನು ಗುರ್ತಿಸಿರುವ ಅಮೆರಿಕದ ಪ್ರತಿಷ್ಟಿತ ಮೈಕ್ರೋಸಾಫ್ಟ್ ಕಂಪನಿ ಈತನಿಗೆ 1.2 ಕೋಟಿ ವೇತನದ ಜಾಬ್ ಆಫರ್ ನೀಡಿದೆ. ವಾತ್ಸಲ್ಯ ಬಿಟೆಕ್ ಅಂತಿಮ ವರ್ಷ ಓದುತ್ತಿದ್ದು, ಜೂನ್ ಅಂತಿಮದಲ್ಲಿ ವ್ಯಾಸಾಂಗ ಮುಗಿದ ಕೂಡಲೇ ಉದ್ಯೋಗಕ್ಕೆ ಸೇರ್ಪಡೆಯಾಗಲಿದ್ದಾನೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಾತ್ಸಲ್ಯ ತಂದೆ ಚಂದ್ರಕಾಂತ್ ಅವರು, ನಾನೊಬ್ಬ ದಿನಗೂಲಿ ಕಾರ್ಮಿಕನಾಗಿದ್ದು, ಮಗನ ವಿದ್ಯಾಭ್ಯಾಸಕ್ಕಾಗಿ ಲೋನ್ ತೆಗೆದುಕೊಳ್ಳುತ್ತಿದ್ದೆ. ಇದೀಗ ಮಗನ ಸಾಧನೆಗೆ ಬಹಳ ಗೌರವವಾಗುತ್ತಿದೆ ಎಂದು ಹೇಳಿ ಮಗನ ಸಾಧನೆಗೆ ಸಂತೋಷದ ಕಂಬನಿ ಮಿಡಿದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT