ಝಿಕಾ ವೈರಾಣು ಹರಡುವ ಸೊಳ್ಳೆ (ಸಂಗ್ರಹ ಚಿತ್ರ) 
ದೇಶ

ಮಾರಕ "ಝಿಕಾ" ವೈರಾಣು ರೋಗಕ್ಕೆ ಭಾರತದಲ್ಲಿ ಔಷಧ ಸಿದ್ಧ..!

ಎಬೋಲಾ ಬಳಿಕ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಾರಕ ವೈರಾಣು ರೋಗ "ಝಿಕಾ"ಗೆ ಔಷಧಿ ತಯಾರಿಸಿರುವುದಾಗಿ ಭಾರತ ಮೂಲದ ಸಂಸ್ಥೆಯೊಂದು ಹೇಳಿಕೊಂಡಿದೆ...

ಹೈದರಾಬಾದ್: ಎಬೋಲಾ ಬಳಿಕ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಾರಕ ವೈರಾಣು ರೋಗ "ಝಿಕಾ"ಗೆ ಔಷಧಿ ತಯಾರಿಸಿರುವುದಾಗಿ ಭಾರತ ಮೂಲದ ಸಂಸ್ಥೆಯೊಂದು  ಹೇಳಿಕೊಂಡಿದೆ.

ಆಂಧ್ರ ಪ್ರದೇಶದ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್​ನ್ಯಾಷನಲ್ ಲಿಮಿಟೆಡ್ ಸಂಸ್ಥೆ ತನ್ನ ಸಂಶೋಧಕರು ಝಿಕಾ ವೈರಾಣು ರೋಗಕ್ಕೆ ಔಷಧಿ ಕಂಡುಹಿಡಿದಿರುವುದಾಗಿ  ಪ್ರತಿಪಾದಿಸಿದೆ. ಅಲ್ಲದೆ ಇದು ಪ್ರಪಂಚದಲ್ಲೇ ಝಿಕಾ ವಿರುದ್ದ ಕಂಡುಹಿಡಿದ ಮೊದಲ ಔಷಧವಾಗಲಿದೆ. 9 ತಿಂಗಳ ಮೊದಲೇ ರೋಗಕ್ಕೆ ಲಸಿಕೆ ಸಿದ್ಧ ಪಡಿಸಲು ಪೇಟೆಂಟ್ ಕೋರಿ ಅರ್ಜಿ ಸಲ್ಲಿಸಿದ  ಪ್ರಥಮ ಕಂಪನಿ ನಮ್ಮದು ಎಂದು ಭಾರತ್ ಬಯೋಟೆಕ್ ವ್ಯವಸ್ಥಾಪಕ ಹಾಗೂ ನಿರ್ದೇಶಕ ಡಾ.ಕೃಷ್ಣಾ ಅವರು ತಿಳಿಸಿದ್ದಾರೆ. ಅಲ್ಲದೇ ಈ ಸಂಬಂಧ ಸರ್ಕಾರದಿಂದ ಪೇಟೆಂಟ್ ಕೂಡ  ಪಡೆದಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ.

"ವಿದೇಶದಿಂದ ಆಮದು ಮಾಡಿಕೊಂಡ ಜೀವಂತ ಝಿಕಾ ವೈರಸ್ ಮಾದರಿ ಪರೀಕ್ಷಿಸಿ ಎರಡು ರೀತಿಯ ಲಸಿಕೆಗಳನ್ನು ಸಿದ್ದಪಡಿಸಲಾಗಿದ್ದು, ಭಾರತ ಸರ್ಕಾರ ಹಾಗೂ ಭಾರತ ವೈದ್ಯಕೀಯ  ಸಂಶೋಧನಾ ಪ್ರಾಧಿಕಾರದಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಪರವಾನಗಿ ನಿಯಂತ್ರಣ ಹಾಗೂ ಔಷಧ ನಿರ್ಮಾಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿದರೆ 4 ತಿಂಗಳಲ್ಲಿ ಲಕ್ಷಕ್ಕೂ ಅಧಿಕ ಲಸಿಕೆಗಳನ್ನು ಸಿದ್ಧಪಡಿಸಿ ರೋಗ ಪೀಡಿತ ರಾಷ್ಟ್ರಗಳಿಗೆ ರವಾನಿಸುವುದಾಗಿ ಡಾ. ಕೃಷ್ಣ ತಿಳಿಸಿದ್ದಾರೆ.

ಇನ್ನು ಭಾರತ್ ಬಯೋಟೆಕ್ ಸಂಸ್ಥೆ ಸಿದ್ದಪಡಿಸಿರುವ ಝಿಕಾ ಲಸಿಕೆಯನ್ನು ತಜ್ಞರಿಂದ ಮತ್ತೊಮ್ಮೆ ಪರೀಕ್ಷಿಸಿ ಅಂತಿಮಗೊಳಿಸಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ  ಪ್ರಾಧಿಕಾರ ಹೇಳಿದೆ.

2015ರ ಮಧ್ಯಭಾಗದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಾರಕ "ಝಿಕಾ" ವೈರಾಣು ರೋಗದ ಕುರಿತು ಗಂಭೀರವಾಗಿ ತಲೆಕೆಡಿಸಿಕೊಂಡಿರುವ ವಿಶ್ವ ಆರೋಗ್ಯ ಸಂಸ್ಥೆ ಸಾಕಷ್ಟು ಕ್ರಮಗಳನ್ನು  ಕೈಗೊಂಡಿತ್ತು. ಇದಾಗ್ಯೂ ರೋಗ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿತ್ತು. ಮೆದುಳಿನ ಬೆಳವಣಿಗೆ ಮೇಲೆ ಗಂಭೀರ ಪರಿಣಾಮ ಬೀರುವ ಝಿಕಾ  ವೈರಾಣುಗಳು ಸೊಳ್ಳೆಗಳ ಮೂಲಕ ಹರಡುತ್ತಿವೆ. ತೀರ ಅಪರೂಪದ ಪ್ರಕರಣಗಳಲ್ಲಿ ಲೈಂಗಿಕ ಕ್ರಿಯೆ ಮೂಲಕವೂ ಈ ವೈರಾಣು ಹರಡುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಇಂತಹ ಒಂದು ಪ್ರಕರಣ ಅಮೆರಿಕದ ಟೆಕ್ಸಾಸ್ ನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಪ್ರಕರಣ: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT