ವಾಯುನೆಲೆ ಬಳಿ ಯೋಧರು (ಸಂಗ್ರಹ ಚಿತ್ರ) 
ದೇಶ

ಪಠಾಣ್ ಕೋಟ್ ದಾಳಿ: 'ಒಳಗಿನವರ' ಕೈವಾಡ ಸಾಧ್ಯತೆ ಬಗ್ಗೆ ಸಾಕ್ಷ್ಯ ಇಲ್ಲ ಎಂದ ಎನ್ಐಎ

ಪಠಾಣ್ ಕೋಟ್ ವಾಯು ನೆಲೆ ಮೇಲೆ ದಾಳಿ ನಡೆಸಿದ್ದ 6 ಭಯೋತ್ಪಾದಕರ ಪೈಕಿ ಇಬ್ಬರು ಒಳಗಿನವರಾಗಿರುವ ಸಾಧ್ಯತೆ ಇದೆ ಎಂದಿದ್ದ ಎನ್ ಐಎ ತನಿಖಾ ತಂಡ ಈಗ ಇಲ್ಲ ಎಂದು ಹೇಳಿದೆ.

ನವದೆಹಲಿ: ಪಠಾಣ್ ಕೋಟ್ ವಾಯು ನೆಲೆ ಮೇಲೆ ದಾಳಿ ನಡೆಸಿದ್ದ 6 ಭಯೋತ್ಪಾದಕರ ಪೈಕಿ ಇಬ್ಬರು ಒಳಗಿನವರಾಗಿರುವ ಸಾಧ್ಯತೆ ಇದೆ ಎಂದಿದ್ದ ಎನ್ ಐಎ ತನಿಖಾ ತಂಡ, ಈಗ ದಾಳಿಯಲ್ಲಿ 'ಒಳಗಿನವರು' ಶಾಮೀಲಾಗಿಲ್ಲ ಎಂದು ಹೇಳಿದೆ.
ವಾಯುನೆಲೆಯಲ್ಲಿ ದಾಳಿ ನಡೆಸಲು ಪಾಕಿಸ್ತಾನದ ಭಯೋತ್ಪಾದಕರಿಗೆ ಒಳಗಿನವರಿಂದಲೇ ಸಹಕಾರ ದೊರೆತಿದೆ ಎಂದು ಎನ್ಐಎ ಶಂಕಿಸಿತ್ತು. ಅಲ್ಲದೇ ಹತ್ಯೆಯಾದ 6 ಉಗ್ರರ ಪೈಕಿ ಇಬ್ಬರು ಒಳಗಿನವರಾಗಿರುವ ಸಾಧ್ಯತೆ ಇದೆ ಎಂದಿತ್ತು. ವಾಯುನೆಲೆ ಸಿಬ್ಬಂದಿಗಳನ್ನು ಕೂಲಂಕುಶವಾಗಿ ವಿಚಾರಣೆಗೊಳಪಡಿಸಿದ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್ಐಎ ಪಠಾಣ್ ಕೋಟ್ ದಾಳಿಯಲ್ಲಿ ಒಳಗಿನವರು ಶಾಮೀಲಾಗಿರುವ ಸಾಧ್ಯತೆ ಇಲ್ಲ ಎಂದಿದೆ.
"ವಾಯುನೆಲೆ ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಲಾಯಿತು, ಅವರ ಹೇಳಿಕೆಗಳನ್ನು ಬೇರೆ ಸಾಕ್ಷ್ಯಗಳು ಸಹ ದೃಢೀಕರಿಸಿದ್ದು ಒಳಗಿನವರ ಸಹಕಾರದಿಂದ ಪಾಕ್ ಭಯೋತ್ಪಾದಕರು ವಾಯುನೆಲೆ ಮೇಲೆ ದಾಳಿ ನಡೆಸಿಲ್ಲ ಎಂದು ಎನ್ಐಎ ಸ್ಪಷ್ಟಪಡಿಸಿದೆ. ಎನ್ಐಎ ತಂಡ ವಾಯು ನೆಲೆಯಲ್ಲಿರುವ 3,500 ಜನರನ್ನು  ಕೂಲಂಕುಷ ಪರಿಶೀಲನೆಗೊಳಪಡಿಸಿತ್ತು. ದಾಳಿಯಲ್ಲಿ ಒಳಗಿನವರ ಕೈವಾಡ ಇರುವ ಸಾಧ್ಯತೆಯನ್ನು ಎನ್ಐಎ ತಂಡ ಸಂಪೂರ್ಣವಾಗಿ ತಳ್ಳಿಹಾಕಿಲ್ಲ. ಕರೆ ದಾಖಲೆಗಳನ್ನು ಪರಿಶೀಲನೆ ನಡೆಸಬೇಕಿದ್ದು, ಇದರಲ್ಲಿ ಏನಾದರೂ ಸಂದೇಹಾಸ್ಪದ ಅಂಶಗಳಿವೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕಿದೆ ಎಂದು ಎನ್ಐಎ ತಂಡ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video