ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ಕಣಿವೆಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಕಣ್ಮರೆಯಾಗಿದ್ದ ಭಾರತೀಯ ಯೋಧರು ಮೃತಪಟ್ಟಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಘೋಷಿಸಿದ್ದಾರೆ.
ಮದ್ರಾಸ್ ರೆಜಿಮೆಂಟ್ ಜೆಒಸಿ ಮತ್ತು 9 ಯೋಧರು ಹಿಮಪಾತದಲ್ಲಿ ಕಣ್ಮರೆಯಾಗಿದ್ದು ಅವರೆಲ್ಲಾ ಮೃತಪಟ್ಟಿದ್ದಾರೆ. ಭಾರತೀಯ ವಾಯುಪಡೆ ಮತ್ತು ಹಿಮದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯ ನಡೆಸಿದರೂ ಯಾವುದೇ ಫಲ ಕಾಣಲಿಲ್ಲ ಎಂದು ಪ್ರಧಾನಿ ಶೋಕ ವ್ಯಕ್ತಪಡಿಸಿದ್ದು, ಅವರ ಸೇವೆಯನ್ನು ದೇಶ ಯಾವತ್ತೂ ನೆನಪಿಸಿಕೊಳ್ಳುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಭೂಮಟ್ಟದಿಂದ 19 ಸಾವಿರ ಅಡಿ ಎತ್ತರದಲ್ಲಿ ಪಹರೆ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿತ್ತು. ವಾಯುಪಡೆ ಮತ್ತು ಸೇನಾಪಡೆ ಯೋಧರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಕಾಣೆಯಾಗಿರುವ ಯೋಧರು ಜೀವಂತವಾಗಿರುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗಿತ್ತು.