ದೇಶ

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಿ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ

Manjula VN

ಅಹ್ಮದಾಬಾದ್: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಿದ ಕಾರಣಕ್ಕೆ ಮಹಿಳೆಯೊಬ್ಬರು ಆತನನ್ನು ಕೋರ್ಟ್ ಮೆಟ್ಟಿಲೇರುವಂತೆ ಮಾಡಿರುವ ಘಟನೆಯೊಂದು ನಡೆದಿದೆ.

ಉಷಾಬೆನ್ ಒಡೆ ಎಂಬುವವರು ಚಹಾ ಅಂಗಡಿಯೊಂದನ್ನು ನಡೆಸುತ್ತಿದ್ದರು. ಈ ವೇಳೆ ಅಂಗಡಿ ಬಂದಿರುವ ಶ್ಯಾಂ ಸುಂದರ್ ದೋಭಿ ಅವರು ಅಂಗಡಿ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ಇದನ್ನು ಉಷಾಬೆನ್ ಅವರು ವಿರೋಧಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ನಂತರ ತೀವ್ರವಾಗಿ ಕೆಂಡಮಂಡಲವಾಗಿರುವ ಉಪಾಬೆನ್ ಅವರು ಪ್ರಕರಣವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ನಂತರ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.

ಪ್ರಕರಣದ ವಿಚಾರಣೆ ನಡೆಸಿರುವ ಜೆ.ಬಿ.ಪರ್ದೀವಾಲಾ ಅವರು, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದು ಅಪರಾಧ ಸರಿ. ಆದರೆ ಹಾನಿಯುಂಟಾಗುವಂತಹ ಅಪರಾಧವೇನೂ ಅಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಆಪಾದಿತ ಶ್ಯಾಮ್ ಸುಂದರ್ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.

ವಿಚಾರಣೆ ವೇಳೆ ಶ್ಯಾಮ್ ಸುಂದರ್ ಅವರ ಪರ ವಕೀಲರು ಘಟನೆ ನಡೆದ ದಿನ ಶ್ಯಾಮ್ ಅವರ ತಾಯಿ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಅವರನ್ನು ನೋಡಲು ಶ್ಯಾಮ್ ಹೋಗಿದ್ದರು. ನಂತರ ಆಸ್ಪತ್ರೆಯಿಂದ ಮರಳಿ ಬರುವಾಗ ರಸ್ತೆ ಬದಿಯಲ್ಲಿ ಮೂತ್ರ ಮಾಡಿದ್ದಾರೆಂದು ವಾದಿಸಿದ್ದರು.

SCROLL FOR NEXT