ವಿಮಾನದಲ್ಲಿ ಗಾಯನ ಮಾಡಿದ ಸೋನು ನಿಗಮ್ (ಚಿತ್ರಕೃಪೆ: ಟ್ವಿಟರ್) 
ದೇಶ

ಗಗನ ಸಖಿಯರ ಅಮಾನತು ನಿಜವಾದ ಅಸಹಿಷ್ಣುತೆ: ಸೋನು ನಿಗಮ್

ವಿಮಾನದಲ್ಲಿ ಹಾಡು ಹಾಡಿ ಚರ್ಚೆಗೆ ಈಡಾಗಿದ್ದ ಗಾಯಕ ಸೋನು ನಿಗಮ್ ಇದೀಗ ಗಗನ ಸಖಿಯರ ಅಮಾನತು ಮಾಡಿದ ಜೆಟ್ ಏರ್ ವೇಸ್ ಕ್ರಮವನ್ನು ಟೀಕಿಸಿದ್ದಾರೆ...

ನವದಹೆಲಿ: ವಿಮಾನದಲ್ಲಿ ಹಾಡು ಹಾಡಿ ಚರ್ಚೆಗೆ ಈಡಾಗಿದ್ದ ಗಾಯಕ ಸೋನು ನಿಗಮ್ ಇದೀಗ ಗಗನ ಸಖಿಯರ ಅಮಾನತು ಮಾಡಿದ ಜೆಟ್ ಏರ್ ವೇಸ್ ಕ್ರಮವನ್ನು ಟೀಕಿಸಿದ್ದಾರೆ.

ತಮಗೆ ಹಾಡಲು ವಿಮಾನದ ಮೈಕ್ ಒದಗಿಸಿದ್ದಕ್ಕಾಗಿ 5 ಗಗನಸಖಿಯರನ್ನು ಅಮಾನತುಗೊಳಿಸಿದ ಜೆಟ್ ಏರ್​ವೇಸ್ ಕ್ರಮ ನನ್ನ ಪ್ರಕಾರ ‘ಸಾಮಾನ್ಯ ಜ್ಞಾನದ ಕೊರತೆ ಮತ್ತು ಇದು ನಿಜವಾದ  ಅಸಹಿಷ್ಣುತೆ’ ಎಂದು ಸೋನು ನಿಗಮ್ ಹೇಳಿದ್ದಾರೆ.

ಗಾಯಕ ಸೋನು ನಿಗಮ್ ಗೆ ವಿಮಾನದಲ್ಲಿ ಹಾಡಲು ವಿಮಾನದ ಮೈಕ್ ನೀಡಿದ ಪ್ರಕರಣದ ವಿರುದ್ಧ ಈ ಹಿಂದೆ ಡಿಜಿಸಿಎ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನಲೆಯಲ್ಲಿ ಜೆಟ್ ಏರ್ ವೇಸ್ ಸಂಸ್ಥೆ ತನ್ನ ಐವರು ಗಗನ ಸಖಿಯರನ್ನು ಅಮಾನತು ಮಾಡಿತ್ತು. ಇದೀಗ ಜೆಟ್ ಏರ್ ವೇಸ್ ಕ್ರಮವನ್ನು ಗಾಯಕ ಸೋನು ನಿಗಮ್ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೋನು ನಿಗಮ್, "ನಾನು ವಿಮಾನಗಳಲ್ಲಿ ಸಾಕಷ್ಟು ಫಾಷನ್ ಶೋ, ಕಿರು ಗಾಯನ ಕೂಟಗಳನ್ನು ನೋಡಿದ್ದೇನೆ. ಪೈಲಟ್​ಗಳು ಮತ್ತು ಸಿಬ್ಬಂದಿಗಳು ಬೇರೆ ರಾಷ್ಟ್ರಗಳಲ್ಲಿ ಜೋಕ್ ಹಾರಿಸುವುದನ್ನು ಕಂಡಿದ್ದೇನೆ. ಅಲ್ಲಿ ಎಲ್ಲೂ ಅಸಹನೆಯನ್ನು ನೋಡಿಲ್ಲ. ಪ್ರಕಟಣೆಗಳನ್ನು ಮಾಡಿದ ಬಳಿಕ ವಿಮಾನದ ಮೈಕ್ ಖಾಲಿ ಇದ್ದಾಗ ನನ್ನಲ್ಲಿ ಹಾಡಲು ಹೇಳಿದ ಗಗನಸಖಿಯರನ್ನು ಅಮಾನುತು ಮಾಡಲಾಗಿದೆ".

"ಪ್ರಯಾಣಿಕರಿಗೆ ಸಂತಸ ಹರಡಿದವರನ್ನು ಶಿಕ್ಷಿಸುವುದರ ಮೂಲಕ ಜೆಟ್ ಏರ್ ವೇಸ್ ತನಗೆ ಸಾಮಾನ್ಯ ಜ್ಞಾನದ ಕೊರತೆ ಇದೆ ಎಂಬುದನ್ನು ಸಾಬೀತು ಪಡಿಸಿದೆ. ಮಾಧ್ಯಮಗಳು ಇಂತಹ ವಿಚಾರಗಳನ್ನು ಪ್ರಶ್ನಿಸದೇ ಇರುವುದು ದುಃಖದ ವಿಚಾರ. ಭಾರತೀಯರು ಸ್ವಲ್ಪ ಮಡಿವಂತಿಕೆ ಬಿಡಬೇಕಾದ ಅಗತ್ಯ ಇದೆ’ ಎಂದು ಸೋನು ನಿಗಮ್ ಹೇಳಿದ್ದಾರೆ.

ಈ ಹಿಂದೆ ಜನವರಿ 4ರಂದು ಜೋಧಪುರದಿಂದ ಮುಂಬೈಗೆ ಜೆಟ್ ಏರ್​ವೇಸ್ ವಿಮಾನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಸೋನು ನಿಗಮ್ ಅವರು ಸಹ ಪ್ರಯಾಣಿಕರ ಕೋರಿಕೆ ಮೇರೆಗೆ ಕೆಲವು ಹಾಡುಗಳನ್ನು ಹಾಡಿದ್ದರು. ಗಗನಸಖಿಯರು ಹಾಡಲು ಅವರಿಗೆ ವಿಮಾನದ ಮೈಕ್ ಒದಗಿಸಿದ್ದರು. ಖುಷಿಯಾಗಿದ್ದ ಪ್ರಯಾಣಿಕರಲ್ಲೂ ಹಲವರು ಹಾಡು ಗುನುಗುನಿಸುತ್ತಾ ಹಾಡಿಗೆ ತಾಳ ಹಾಕಿದ್ದರು. ಈ ‘ಗಾಯನಕೂಟ’ದ ವಿಡಿಯೋಗಳು ಅಂತರ್ಜಾದಲ್ಲಿ ಹರಿದಾಡಿದಾಗ ಡಿಜಿಸಿಎ ವಿಮಾನ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನಲೆಯಲ್ಲಿ ಇಂದು ಐವರು ಗಗನ ಸಖಿಯರನ್ನು ಜೆಟ್ ಏರ್ ವೇಸ್ ಅಮಾನತು ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ