ನವದೆಹಲಿ: ದೇಶದಲ್ಲಿ ಉಗ್ರ ದಾಳಿಗೆ ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಸ್ವಯಂಘೋಷಿತ ಮುಸ್ಲಿಂ ಧರ್ಮಗುರು ಒಬ್ಬರನ್ನು ಶನಿವಾರ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಸೀಲಂಪುರ ನಿವಾಸಿ ಅಬ್ದುಸ್ ಸಮಿ ಖಾಸ್ಮಿಯನ್ನು ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಉಗ್ರ ಸಂಘಟನೆ ಕಟ್ಟಲು ಮುಂದಾಗಿದ್ದ ಹಾಗೂ ದೇಶದಲ್ಲಿ ಉಗ್ರ ದಾಳಿ ಸಂಚು ರೂಪಿಸಿದ್ದ ಆರೋಪದ ಮೇಲೆ ಖಾಸ್ಮಿಯನ್ನು ಬಂಧಿಸಲಾಗಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಖಾಸ್ಮಿ ಪ್ರಚೋದನಾತ್ಮಕ ಭಾಷಣಗಳನ್ನು ಮಾಡಿ, ಅದನ್ನು ಕೆಲವು ವೆಸ್ ಸೈಟ್ ಗಳಿಗೆ ಅಪ್ ಲೋಡ್ ಮಾಡುತ್ತಿದ್ದ. ದೇಶ ವಿರೋಧಿ ಕೃತ್ಯಗಳಿಗೆ ಯುವಕರನ್ನು ಪ್ರೆರೇಪಿಸುತ್ತಿದ್ದ. ಅಲ್ಲದೆ ಪ್ರಚೋದನಾತ್ಮಕ ಭಾಷಣ ಮಾಡಲು ದೇಶದ ಹಲವು ಭಾಗಗಳಿಗೆ ಭೇಟಿ ನೀಡಿದ್ದಾನೆ ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ.
ಖಾಸ್ವಿ ಒಂದು ಟ್ರಸ್ಟ್ ಹಾಗೂ ಮದ್ರಾಸವನ್ನು ನಡೆಸುತ್ತಿದ್ದು, ಆತನ ನಡೆಸಿದ ಹಣಕಾಸಿನ ವ್ಯವಹಾರ ಅನುಮಾನಾಸ್ಪದವಾಗಿದ್ದು, ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics