ದೇಶ

ಸುಪ್ರೀಂ ಕೋರ್ಟ್ ಮುಸ್ಲಿಂ ವೈಯಕ್ತಿಕ ಕಾನೂನು ಪ್ರಶ್ನಿಸುವಂತಿಲ್ಲ: ಜಮಿಯತ್ ಉಲೇಮಾ

Mainashree
ನವದೆಹಲಿ: ಮುಸ್ಲಿಂ ಧರ್ಮದ ವೈಯಕ್ತಿಕ ಕಾನೂನನ್ನು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡುವಂತಿಲ್ಲ ಎಂದು ಜಮಿಯತ್ ಉಲೇಮಾ ಎ ಹಿಂದ್ ಸಂಘಟನೆ ಹೇಳಿದೆ. 
ಪವಿತ್ರ ಕುರಾನ್ ಆಧಾರದ ಮೇಲೆ  ಮಹಮ್ಮದೀಯ ಕಾನೂನು ಸ್ಥಾಪಿಸಲಾಗಿದೆ. ಸಂವಿಧಾನ ಅನುಚ್ಛೇದ(13)ರ ಪ್ರಕಾರ ಮಹಮ್ಮದೀಯ ಕಾನೂನು ಚಾಲ್ತಿಯಲ್ಲಿರುವ ಕಾನೂನಿ ನಿಯಮಗಳ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೇ ಇವುಗಳ ಸಿಂಧುತ್ವವನ್ನು ಸಂವಿಧಾನದ ಮೂರನೇ ಭಾಗದಡಿ ಪರೀಕ್ಷೆಗೆ ಒಳಪಡಿಸಲು ಆಗುವುದಿಲ್ಲ ಎಂದು ಮುಸ್ಲಿಂ ಧರ್ಮಗುರು ಸಂಘಟನೆಯಾದ ಜಮಿಯತ್ ಉಲೇಮಾ ಏ ಹಿಂದ್ ಅಭಿಪ್ರಾಯಪಟ್ಟಿದೆ. 
ಇಜಾಜ್ ಮಕ್ ಬೂಲ್ ಅವರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಜೆಯುಎಸ್ ಅರ್ಜಿಯಲ್ಲಿ ಈ ರೀತಿ ಹೇಳಲಾಗಿದೆ. 
ಈ ಹಿಂದೆ ಮುಸ್ಲಿಂ ವೈಯಕ್ತಿಕ ಕಾನೂನಿನಿಂದ ಮಹಿಳೆಯರ ಹಕ್ಕುಗಳಿಗೆ ಧಕ್ಕೆಯಾಗುತ್ತಿದ್ದು, ಮೂರು ಬಾರಿ ತಲಾಕ್ ನೀಡುವ ವ್ಯವಸ್ಥೆ ಮತ್ತು ಬಹುಪತ್ನಿತ್ವ ಬಗ್ಗೆ ಸುಪ್ರೀಂಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿತ್ತು.
SCROLL FOR NEXT