ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಇಂಡೋ-ಪಾಕ್ ಗಡಿಯಲ್ಲಿ ಸ್ಮಗ್ಲಿಂಗ್: ಇಬ್ಬರು ಭಾರತೀಯರು ಸೇರಿ ನಾಲ್ವರ ಹತ್ಯೆ

ಪಾಕಿಸ್ತಾನದಿಂದ ಭಾರತಕ್ಕೆ ಮಾದಕ ವಸ್ತುಗಳನ್ನು ಅಕ್ರಮವಾಗಿ ಕಳ್ಳ ಸಾಗಾಣಿಕೆ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಬಿಎಸ್ಎಫ್ ಯೋಧರು ಭಾನುವಾರ ಹತ್ಯೆ ಮಾಡಿದ್ದಾರೆ...

ಇಂಡೋ-ಪಾಕ್ ಗಡಿಯಲ್ಲಿ ಸ್ಮಗ್ಲಿಂಗ್: ಇಬ್ಬರು ಭಾರತೀಯರು ಸೇರಿ ನಾಲ್ವರ ಹತ್ಯೆ
Manjula VN
Updated On : 7 Feb 2016, 9:45 am

ಖೆಮ್ ಕರಣ್ (ಪಂಜಾಬ್): ಪಾಕಿಸ್ತಾನದಿಂದ ಭಾರತಕ್ಕೆ ಮಾದಕ ವಸ್ತುಗಳನ್ನು ಅಕ್ರಮವಾಗಿ ಕಳ್ಳ ಸಾಗಾಣಿಕೆ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಬಿಎಸ್ಎಫ್ ಯೋಧರು ಭಾನುವಾರ ಹತ್ಯೆ ಮಾಡಿದ್ದಾರೆ.

ಪಂಜಾಬಿನ ಖೆಮ್ ಕರಣ್ ಪ್ರಾಂತ್ಯದ ಬಳಿ ಪಾಕಿಸ್ತಾನದ ಗಡಿಯಿಂದ ಭಾರತಕ್ಕೆ ಹೆರಾಯಿನ್ ಗಳನ್ನು ಸಾಗಿಸಲು ನಾಲ್ವರು ಯತ್ನ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಬಿಎಸ್ಎಫ್ ಯೋಧರು ಕಾರ್ಯಾಚರಣೆ ನಡೆಸಿ ನಾಲ್ವರನ್ನೂ ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ. ಹತ್ಯೆ ಮಾಡಿದ ನಾಲ್ವರಲ್ಲಿ ಇಬ್ಬರು ಪಾಕಿಸ್ತಾನಿಗಳು ಹಾಗೂ ಇಬ್ಬರು ಭಾರತೀಯರು ಎಂದು ಹೇಳಲಾಗುತ್ತಿದೆ.

ಸಾವನ್ನಪ್ಪಿದ ನಾಲ್ವರು ಅಂತರಾಷ್ಟ್ರೀಯ ಸ್ಮಗ್ಲರ್ ಗಳು ಎಂದು ಹೇಳಲಾಗುತ್ತಿದ್ದು, ನಾಲ್ವರು 10 ಕೆ.ಜಿ ಹೆರಾಯನ್ ಗಳನ್ನು ಭಾರತಕ್ಕೆ ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದರು. ಇದೀಗ ನಾಲ್ವರನ್ನು ಹತ್ಯೆ ಮಾಡಿರುವ ಯೋಧರು ರು. 50 ಕೋಟಿ ಮೌಲ್ಯದ ಹೆರಾಯಿನ್'ನ್ನು ವಶ ಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments