ನವದೆಹಲಿ: ಹವಾನಿಯ೦ತ್ರಿತ ಪ್ರಥಮ ದರ್ಜೆಯ ಬೋಗಿಯಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ನೀಡಲಾಗುತ್ತಿದ್ದ ರಿಯಾಯಿತಿಯನ್ನು ರೈಲ್ವೇ ಇಲಾಖೆ ರದ್ದು ಮಾಡಿದೆ.
ರೈಲ್ವೇ ಇಲಾಖೆಯ ನಷ್ಟವನ್ನು ಕಡಿಮೆ ಮಾಡುವ ಉದ್ದೇಶದಿಂದ ಅಧಿಕಾರಗಳು ಈ ಕ್ರಮಕ್ಕೆ ಮುಂದಾಗಿದ್ದು, ಈವರೆಗೆ ಹಿರಿಯನಾಗರಿಕರಿಗೆ ನೀಡಲಾಗುತ್ತಿದ್ದ ರಿಯಾಯ್ತಿಯನ್ನು ರದ್ದುಗೊಳಿಸಲು ರೈಲ್ವೆ ಇಲಾಖೆ ನಿರ್ಧಾರ ಕೈಗೊಂಡಿದೆ. ಪ್ರಸ್ತುತ ಹಿರಿಯ ನಾಗರಿಕರಿಗೆ ರೈಲ್ವೆ ಟಿಕೆಟ್ ಮೇಲೆ ಶೇ. 50 ವರೆಗೂ ರಿಯಾಯಿತಿ ದೊರೆಯುತ್ತಿದ್ದು, ತೀವ್ರ ಹಣಕಾಸು ಸಮಸ್ಯೆ ಎದುರಿಸುತ್ತಿರುವ ರೈಲ್ವೆ ಇಲಾಖೆ, ವೆಚ್ಚ ಕಡಿತದ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದೆ.
ಮು೦ಬರುವ ರೈಲ್ವೆ ಬಜೆಟ್ ಒಳಗಾಗಿ ಈ ಪ್ರಸ್ತಾವನೆಗೆ ಸ೦ಪುಟದ ಒಪ್ಪಿಗೆ ಪಡೆಯಲು ರೈಲ್ವೆ ಇಲಾಖೆ ನಿಧ೯ರಿಸಿದೆ. ಕೇವಲ ಎಸಿ ಪ್ರಯಾಣದ ರಿಯಾಯ್ತಿಗಳನ್ನು ರದ್ದುಪಡಿಸುವ ಪ್ರಸ್ತಾವನೆಯಿದ್ದು, ಉಳಿದ ದಜೆ೯ಯ ಪ್ರಯಾಣಕ್ಕೆ ನೀಡಲಾಗುವ ರಿಯಾಯ್ತಿಗಳು ಮು೦ದುವರಿಯಲಿದೆ ಎ೦ದು ಮೂಲಗಳು ತಿಳಿಸಿವೆ.