ಜಿಲ್ಲಾಧಿಕಾರಿಗಳು ಕರೆದಿದ್ದ ಸಭೆ ಆಗಮಿಸಿದ್ದ ಮಹಿಳಾ ಕಾರ್ಯಕರರ್ತರು (ಚಿತ್ರಕೃಪೆ: ಪುಣೆ ಮಿರರ್) 
ದೇಶ

ಶನಿ ಶಿಂಗಣಾಪುರ ವಿವಾದ: ಸಿಎಂ ನಿರ್ಧಾರಕ್ಕೆ ಬದ್ಧ ಎಂದ ಮಹಿಳೆಯರು..!

ಶನಿ ಶಿಂಗಣಾಪುರ ದೇವಾಲಯಕ್ಕೆ ಮಹಿಳೆಯರಿಗೂ ಅವಕಾಶ ನೀಡಬೇಕು ಎಂದು ಕಳೆದ 15 ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಗೆ ಶನಿವಾರ ತಾರ್ಕಿಕ ಅಂತ್ಯ ದೊರೆಯುವ ಮುನ್ಸೂಚನೆ ದೊರೆತಿದ್ದು, ದೇವಾಲಯದ ಆಡಳಿತ ಮಂಡಳಿ ಮತ್ತು ಮಹಿಳಾ ಸಂಘಟನೆ ನಡುವೆ ನಡೆದ ಮಾತುಕತೆ ಸಫಲವಾಗಿದೆ ಎಂದು ತಿಳಿದುಬಂದಿದೆ...

ಮು೦ಬ್ಯೆ: ಶನಿ ಶಿಂಗಣಾಪುರ ದೇವಾಲಯಕ್ಕೆ ಮಹಿಳೆಯರಿಗೂ ಅವಕಾಶ ನೀಡಬೇಕು ಎಂದು ಕಳೆದ 15 ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಗೆ ಶನಿವಾರ ತಾರ್ಕಿಕ ಅಂತ್ಯ ದೊರೆಯುವ  ಮುನ್ಸೂಚನೆ ದೊರೆತಿದ್ದು, ದೇವಾಲಯದ ಆಡಳಿತ ಮಂಡಳಿ ಮತ್ತು ಮಹಿಳಾ ಸಂಘಟನೆ ನಡುವೆ ನಡೆದ ಮಾತುಕತೆ ಸಫಲವಾಗಿದೆ ಎಂದು ತಿಳಿದುಬಂದಿದೆ.

ಸತತ ಚರ್ಚೆಯ ಬಳಿಕ ಒಕ್ಕೋರಲಿನ ನಿರ್ದಾರಕ್ಕೆ ಬಂದಿರುವ ದೇವಾಲಯದ ಆಡಳಿತ ಮಂಡಳಿ ಮತ್ತು ಮಹಿಳಾ ಸಂಘಟನೆ ಸದಸ್ಯರು, ವಿವಾದವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ  ದೇವೇ೦ದ್ರ ಫಡ್ನವಿಸ್‍ ಅವರ ವಿವೇಚನೆಗೆ ಬಿಟ್ಟಿದ್ದಾರೆ. ವಿವಾದ ಸಂಬಂಧ ಸಿಎಂ ದೇವೇಂದ್ರ ಫಡ್ನವಿಸ್ ಅವರು ಕೈಗೊಳ್ಳುವ ನಿರ್ಧಾರಕ್ಕೆ ತಮ್ಮ ಸಮ್ಮತಿ ಇದೆ ಎಂದು ಉಭಯ ಸದಸ್ಯರು  ಹೇಳಿದ್ದಾರೆ. ಶನಿವಾರ ಮಹಿಳಾ ಸ೦ಘಟನೆಗಳು, ದೇವಸ್ಥಾನ ಆಡಳಿತ ಮ೦ಡಳಿ ಮತ್ತು ಜಿಲ್ಲಾಡಳಿತ ಅಧಿಕಾರಿಗಳು ಸಭೆ ನಡೆಸಿ ವಿವಾದ ಕುರಿತು ಮಾತುಕತೆ ನಡೆಸಿದ್ದರು.

ಮಹಿಳೆಯರ ಪರ ತೀರ್ಮಾನ: ಆಶಾ ಭಾವನೆ ವ್ಯಕ್ತಪಡಿಸಿದ ಮಹಿಳಾ ಸಂಘಟನೆ
ಇದೇ ವೇಳೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ನಿರ್ಧಾರ ಮಹಿಳೆಯರ ಪರವಾಗಿರುತ್ತದೆ ಎಂದು ಭೂಮಾತಾ ಮಹಿಳಾ ಸಂಘಟನೆಯ ಸದಸ್ಯರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಈ  ಹಿಂದೆ ವಿವಾದ ಸಂಬಂಧ ಅಭಿಪ್ರಾಯವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, "ಪ್ರತಿಯೊಬ್ಬರಿಗೂ ಪೂಜಿಸುವ ಹಕ್ಕಿದೆ' ಎ೦ದು ಹೇಳಿದ್ದರು. ಈ ಹೇಳಿಕೆಯ ಹಿನ್ನಲೆಯಲ್ಲಿ  ಸಿಎಂ ಫಡ್ನವಿಸ್ ಅವರು ಶನಿ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶಾವಕಾಶ ನೀಡುವ ನಿಲುವು ಹೊ೦ದಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಈ ವಿವಾದ ಕೆಲವೇ ದಿನಗಳಲ್ಲಿ ವಿವಾದ ಇತ್ಯಥ೯ವಾಗುವ  ನಿರೀಕ್ಷೆ ಇದೆ.

"ಪುರಾತನ ಸ೦ಪ್ರದಾಯದ ಹೆಸರಲ್ಲಿ ಮಹಿಳೆಯರಿಗೆ ನಿರ್ಬಂಧ ವಿಧಿಸಿರುವುದನ್ನು ರದ್ದುಪಡಿಸುವ ಸ೦ಬ೦ಧ ಸಿಎ೦ ಫಡ್ನವಿಸ್ ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಸದ್ಯದಲ್ಲೇ  ದೇಗುಲದಲ್ಲಿ ಮಹಿಳೆಯರಿಗೂ ಅವಕಾಶ ಕಲ್ಪಿಸುವ ವಿಶ್ವಾಸವಿದೆ" ಎ೦ದು ಭೂಮಾತಾ ಬ್ರಿಗೇಡ್‍ನ ಮುಖ್ಯಸ್ಥೆ ತೃಪ್ತಿ ದೇಸಾಯಿ ಹೇಳಿದ್ದಾರೆ.

ಜನವರಿ 26ರ೦ದು ಭಾರಿ ಪ್ರತಿಭಟನೆ  ಹಮ್ಮಿಕೊ೦ಡಿದ್ದ ಭೂಮಾತಾ ಬ್ರಿಗೇಡ್ ಸದಸ್ಯೆಯರು ದೇಗುಲದ ಒಳಗೆ ನುಗ್ಗಲು ನಿರ್ಧರಿಸಿದ್ದರು. ಆದರೆ ದೇಗುಲದಿ೦ದ 70 ಕಿ.ಮೀ ದೂರದಲ್ಲಿ ಸುಪಾದಲ್ಲೇ ಪ್ರತಿಭಟನಾಕಾರರನ್ನು ತಡೆದ  ಪೊಲೀಸರು ಶಾ೦ತಿ ಸುವ್ಯವಸ್ಥೆ ಭ೦ಗಗೊಳಿಸುವ ಪ್ರಯತ್ನಕ್ಕೆ ತಡೆಒಡ್ಡಿದ್ದರು. ಇದು ಭಾರಿ ಚಚೆ೯ಗೊಳಗಾದ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ದೇಗುಲದ ಆಡಳಿತ ಮ೦ಡಳಿ ಮತ್ತು ಪ್ರತಿಭಟನಾ  ನಿರತ ಮಹಿಳಾ ಸ೦ಘಟನೆಗಳ ಸಭೆಯನ್ನು ಜಿಲ್ಲಾಡಳಿತ ಕರೆದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT