ದೇಶ

418 ಬಾರ್ ಹೋಟೆಗಳನ್ನು ಮತ್ತೆ ಆರಂಭಿಸಲು ಎಲ್ ಡಿಎಫ್ ಒಪ್ಪಿದೆ: ಬಿಜು ರಮೇಶ್

Lingaraj Badiger
ತಿರುವನಂತಪುರಂ: ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೆರಿ ಬಾಲಕೃಷ್ಣನ್ ಸೇರಿದಂತೆ ಎಡರಂಗದ ನಾಯಕರು ಕೇರಳ ಮುಖ್ಯಮಂತ್ರಿ ಉಮನ್ ಚಾಂಡಿ ಸರ್ಕಾರ ಬಂದ್ ಮಾಡಿದ್ದ 418 ಬಾರ್ ಹೋಟೆಗಳನ್ನು ಮತ್ತೆ ಆರಂಭಿಸುವ ಭರವಸೆ ನೀಡಿದ್ದಾರೆ ಎಂದು ಹೋಟೆಲ್ ಮಾಲೀಕ ಬಿಜು ರಮೇಶ್ ಅವರು ಸೋಮವಾರ ತಿಳಿಸಿದ್ದಾರೆ.
ಬಾರ್ ಹೋಟೆಲ್ ಮಾಲೀಕರ ಸಭೆಯಲ್ಲಿ ಮಾತನಾಡಿದ ಬಿಜು ರಮೇಶ್ ಅವರು, ಒಂದು ವೇಳೆ ಸಿಪಿಎಂ ಹಿರಿಯ ನಾಯಕ ಹಾಗೂ ಪ್ರತಿಪಕ್ಷ ನಾಯಕ ವಿ.ಎಸ್.ಅಚ್ಚುತಾನಂದನ್ ಅವರು ಈಗ ಬಂದ್ ಮಾಡಲಾಗಿರುವ ಬಾರ್ ಗಳನ್ನು ಮತ್ತೆ ಆರಂಭಿಸಲು ಒಪ್ಪಿದರೆ, ಸರ್ಕಾರ ಸಹ ಮದ್ಯ ನಿಷೇಧ ಆದೇಶವನ್ನು ಹಿಂಪಡೆಯಲಿದೆ ಎಂದು ಹೇಳಿದರು.
ಬಿಜು ರಮೇಶ್ ಅವರು ಎಲ್ ಡಿಎಫ್ 418 ಬಾರ್ ಹೋಟೆಗಳನ್ನು ಮತ್ತೆ ಆರಂಭಿಸುವ ಭರವಸೆ ನೀಡಿದೆ ಎಂದು ಹೇಳಿರುವುದರಿಂದ ಬಾರ್ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಯುಡಿಎಫ್ ನಂತರ ಈಗ ಎಲ್ ಡಿಎಫ್ ಸಹ ಸಂಕಷ್ಟಕ್ಕೆ ಸಿಲುಕಿದೆ.
ಬಿಜು ರಮೇಶ್ ಅವರು ಬಾರ್ ಹೋಟೆಲ್ ಮಾಲೀಕರ ಸಭೆಯಲ್ಲಿ ಮಾತನಾಡಿದ ಸಂಭಾಷಣೆ ಆಡಿಯೇ ಬಿಡುಗಡೆಯಾಗಿದ್ದು, ಆಡಿಯೋ ಪ್ರಕಾರ, ಪ್ರತಿಪಕ್ಷದ ನಾಯಕರು ಸಹ ಬಾರ್ ಹೋಟೆಲ್ ಗಳ ಆರಂಭಕ್ಕೆ ಬೆಂಬಲ ನೀಡಿದರೆ, ಸರ್ಕಾರವನ್ನೆ ಹುರುಳಿಸಬಹುದು. ಅಲ್ಲದೆ ಜಾಗೃತ ದಳದ ಎಸ್ ಪಿ ಸುಕೇಶ್ ಅವರು ಸರ್ಕಾರದ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ ಎಂದು ರಮೇಶ್ ಹೇಳಿದ್ದಾರೆ.
SCROLL FOR NEXT