ಸಾಂದರ್ಭಿಕ ಚಿತ್ರ 
ದೇಶ

ಜನ್ ಔಷಧಿ ಮಳಿಗೆಗಳ ಪುನರ್ ನವೀಕರಣಕ್ಕೆ ಮುಂದಾದ ಕೇಂದ್ರ

ಬಡವರಿಗೆ ಹಾಗೂ ಜನ ಸಮಾನ್ಯರಿಗೆ ಔಷಧಿಗಳು ಸಾಮಾನ್ಯ ದರದಲಲ್ಲಿ ಸಿಗುವಂತೆ ಮಾಡಲು ಜನ್ ಔಷಧಿ ಮಳಿಗೆಗಳ ಪುನರ್ ನವೀಕರಣಕ್ಕೆ ಪ್ರಧಾನಿ ..

ನವದೆಹಲಿ: ಬಡವರಿಗೆ ಹಾಗೂ ಜನ ಸಮಾನ್ಯರಿಗೆ ಔಷಧಿಗಳು ಸಾಮಾನ್ಯ ದರದಲಲ್ಲಿ ಸಿಗುವಂತೆ ಮಾಡಲು ಜನ್ ಔಷಧಿ ಮಳಿಗೆಗಳ ಪುನರ್ ನವೀಕರಣಕ್ಕೆ ಪ್ರಧಾನಿ ಕಾರ್ಯಾಲಯ ಮುಂದಾಗಿದೆ.

ಉತ್ತಮ ಗುಣಮಟ್ಟದ ಔಷಧಿಗಳನ್ನು ಜನ ಸಾಮಾನ್ಯರಿಗೆ ತಲುಪಿಸಲು ಮುಂದಾಗಿರುವ ಕೇಂದ್ರದ ಔಷಧ ಇಲಾಖೆ  2008 ರಲ್ಲಿ ಈ ಯೋಜನೆ ಜಾರಿಗೆ ತಂದಿತ್ತು. ದೇಶಾದ್ಯಂತ ಪ್ರತಿ ಜಿಲ್ಲೆಗೆ ಒಂದು ಜನ್ ಔಷಧಿ ಮಳಿಗೆ ತೆರೆಯುವುದು ಇಲಾಖೆಯ ಗುರಿಯಾಗಿತ್ತು. ಆದರೆ ಮಾರ್ಚ್ 2012 ರ ವೇಳೆಗೆ ಕೇವಲ 112 ಅಂಗಡಿಗಳು ಮಾತ್ರ ತೆರೆಯಲಾಗಿತ್ತು. ಅದರಲ್ಲಿ ಕೇವಲ 99 ಜನ್ ಔಷಧಿ ಮಳಿಗೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು.

ಈ ಜನ್ ಔಷಧಿ ಯೋಜನೆಯನ್ನು ಪರಿಣಾಮಕಾರಿಯಾಗಿ ಮತ್ತೆ ಜಾರಿಗೆ ತರಲು ಕೇಂದ್ರ ಔಷಧ ಇಲಾಖೆ ನಿರ್ಧರಿಸಿದೆ. ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಯಕ್ತಿಕವಾಗಿ ಜನ್ ಔಷದಿ ಮಳಿಗೆಗಳನ್ನು  ತೆರೆಯಲು ಆಸಕ್ತಿ ಉಳ್ಳವರು ಇದನ್ನು ಪ್ರಾರಂಭಿಸಬಹುದಾಗಿದೆ. ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನ್ ಔಷಧ ಮಳಿಗೆ ತೆರೆಯಲು ಸರ್ಕಾರ ಸುಮಾರು2.5 ಲಕ್ಷ ರುಪಾಯಿ ಧನ ಸಹಾಯ ನೀಡಲಿದೆ.ಜೊತೆಗೆ ಜಾಗವನ್ನು ಸಹ ಉಚಿತವಾಗಿ ನೀಡಲಿದೆ.

ಔಷಧಿ  ಅಂಗಡಿ ಪೀಠೋಪಕರಣಕ್ಕಾಗಿ 1 ಲಕ್ಷ, ಕಂಪ್ಯೂಟರ್ ಮತ್ತಿತರ ವಸ್ತುಗಳಿಗಾಗಿ 50 ಸಾವಿರ, ಆರಂಭದಲ್ಲಿ ಉಚಿತವಾಗಿ ಔಷದಿ ನೀಡುವ ಸಲುವಾಗಿ 1 ಲಕ್ಷ ರು. ಹಣವನ್ನು ಸರ್ಕಾರ ನೀಡುತ್ತದೆ. ಇನ್ನು  ಔಷಧಿ ಮಾರಾಟದ ಮೇಲೆ ತಿಂಗಳಿಗೆ ಸುಮಾರು 1.5 ಲಕ್ಷ ರು. ಪ್ರೋತ್ಸಾಹ ಧನ ಕೂಡ ನೀಡಲಾಗುತ್ತದೆ.

ಮುಂದಿನ ಮಾರ್ಚ್ ವೇಳೆಗೆ ಸುಮಾರು 1 ಸಾವಿರ ಜನ್ ಔಷಧಿ ಅಂಗಡಿಗಳನ್ನು ಸರ್ಕಾರದ ಮುಂದೆ ಪ್ರಸ್ತಾವನೆ ಇಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷ ಮುಗಿಯುವ ವೇಳೆಗೆ ದೇಶದ 543 ಲೋಕಸಭೆ ಕ್ಷೇತ್ರಗಳಲ್ಲಿ ಕೊನೆ ಪಕ್ಷ ಒಂದೊಂದು ಜನ್ ಔಷಧಿ ಮಳಿಗೆ ಆರಂಭಿಸಲು  ಔಷಧ ಇಲಾಖೆ ತೀರ್ಮಾನಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT