ಶಿಖರ್ ದೀಪ್ 
ದೇಶ

ನಿಗೂಢವಾಗಿ ನಾಪತ್ತೆಯಾದ ಕ್ಯಾಪ್ಟನ್ ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿದ ಸೇನೆ

ನಿಗೂಢವಾಗಿ ನಾಪತ್ತೆಯಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ಕ್ಯಾಪ್ಟನ್ ಶಿಖರ್ ದೀಪ್ ಅವರ....

ಕೋಲ್ಕತಾ: ನಿಗೂಢವಾಗಿ ನಾಪತ್ತೆಯಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ಕ್ಯಾಪ್ಟನ್ ಶಿಖರ್ ದೀಪ್ ಅವರ ಪತ್ತೆಗೆ ಸಹಕಾರ ನೀಡುವಂತೆ ಭಾರತೀಯ ಸೇನೆ ಸಾರ್ವಜನಿಕರನ್ನು ಕೋರಿದೆ.
ಕ್ಯಾಪ್ಟನ್ ಶಿಖರ್ ದೀಪ್ ಅವರು ಫೆಬ್ರವರಿ 6-7ರಂದು ಬಿಹಾರದಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ಇದ್ದಕ್ಕಿದಂತೆ ಕಾಣೆಯಾಗಿದ್ದಾರೆ. ಶಿಖರ್ ದೀಪ್ ಅವರನ್ನು ಬರಮಾಡಿಕೊಳ್ಳಲು ರೈಲ್ವೆ ನಿಲ್ದಾಣಕ್ಕೆ ತೆರಳಿದ್ದ ಅವರ ಸಂಬಂಧಿಗೆ ಶಿಖರ್ ಅವರ ಲಗೇಜ್, ಫೋನ್, ವ್ಯಾಲೆಟ್ ಮಾತ್ರ ಪತ್ತೆಯಾಗಿದೆ. ವ್ಯಾಲೆಟ್​ನಲ್ಲಿದ್ದ ಹಣ ಕಳುವಾಗಿದೆ. ಈ ಸಂಬಂಧ ಶಿಖರ್ ದೀಪ್ ಅವರ ಸಂಬಂಧಿ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಮಧ್ಯೆ, ಶಿಖರ್ ದೀಪ್ ಅವರ ತಂದೆ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಶಿಖರ್ ದೀಪ್ ನಿಗೂಢವಾಗಿ ಕಾಣೆಯಾಗಿರುವ ಪ್ರಕರಣದ ಹಿಂದೆ ಭಯೋತ್ಪಾದಕ ಸಂಘಟನೆಗಳ ಕೈವಾಡವಿರಬಹುದು ಎಂದು ಶಂಕಿಸಿದ್ದಾರೆ.
ಇನ್ನು ರೈಲ್ವೆ ಟಿಕೆಟ್ ಕಲೆಕ್ಟರ್ ಶಿಖರ್ ದೀಪ್ ಅವರನ್ನು ಕೊನೆಯ ಬಾರಿಗೆ ಕಾನ್​ಪುರದಲ್ಲಿ ನೋಡಿದ್ದೇನೆ, ಆ ನಂತರ ಅವರನ್ನು ನೋಡಿಲ್ಲ ಎಂದು ತಿಳಿಸಿದ್ದಾರೆ. ಸೇನೆ ಕಾಣೆಯಾಗಿರುವ ಶಿಖರ್ ದೀಪ್ ಅವರನ್ನು ಹುಡುಕಲು ಮಾಧ್ಯಮ ಮತ್ತು ಸಾರ್ವಜನಿಕರ ಸಹಕಾರ ಕೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT