ದೆಹಲಿ: ನಮ್ಮನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಗೆ ನೋಡಿಕೊಳ್ಳುತ್ತಿದ್ದರೋ ಹಾಗೆಯೇ ನಮ್ಮನ್ನು ನೋಡಿಕೊಳ್ಳಿ ಎಂದು ಕೇಂದ್ರ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ಮಿತ್ರ ಪಕ್ಷಗಳು ಹೇಳಿವೆ.
ಸುದ್ದಿಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿ ಪ್ರಕಾರ ಅಕಾಲಿ ದಳ್ ನಮ್ಮನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಬಿಜೆಪಿಗೆ ಹೇಳಿದೆ. ಇದೀಗ ಬಜೆಟ್ ಅಧಿವೇಶನ ಸನ್ನಿಹಿತವಾಗಿದ್ದು ಎಸ್‌ಎಡಿ ಮುಖ್ಯಸ್ಥ ಮತ್ತು ಪಂಜಾಬ್ ಉಪ ಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ಅವರು ಎನ್‌ಡಿಎಯಲ್ಲಿರುವ ಮಿತ್ರಪಕ್ಷಗಳನ್ನು ಲಘುವಾಗಿ ಪರಿಗಣಿಸುವುದು ಬೇಡ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಂತೆ ಎನ್‌ಡಿಎ ಮಿತ್ರ ಪಕ್ಷಗಳ ಮಾತನ್ನೂ ಆಲಿಸಬೇಕು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮುಸ್ಲಿಂ ಆಗಲಿ ಕ್ರೈಸ್ತರಾಗಲೀ ಬಿಜೆಪಿಯಲ್ಲಿ ಇಲ್ಲ, ಹೀಗಿರುವಾಗ ಬಿಜೆಪಿಗೆ ಬೆಂಬಲ ನೀಡಿದ್ದ ಸಿಖ್ಖರನ್ನು ದೂರ ಮಾಡುವುದೇಕೆ? ಎಂದು ಬಾದಲ್ ಪ್ರಶ್ನಿಸಿದ್ದಾರೆ.
ಅದೇ ವೇಳೆ ಟಿಡಿಪಿ ಮುಖ್ಯಸ್ಥ ಮತ್ತು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಬಿಜೆಪಿ ತನ್ನ ಮೈತ್ರಿಕೂಟವನ್ನು ಬಲ ಪಡಿಸಬೇಕಾಗಿದೆ ಎಂದಿದ್ದಾರೆ.
ಏತನ್ಮಧ್ಯೆ, ಎನ್‌ಡಿಎಯಲ್ಲಿ ಸಹಯೋಗದ ಕೊರತೆ ಇರುವ ಕಾರಣ ಅಮಿತ್ ಶಾ ಅವರು ಶಿರೋಮಣಿ ಅಕಾಲಿ ದಳದ ನೇತಾರರ ನಿವಾಸಕ್ಕೆ ತೆರಳಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics