ನವದೆಹಲಿ; ಬಹು ನಿರೀಕ್ಷಿತ ಕನಸಿನ ಮಗು 'ಮೇಕ್ ಇನ್ ಇಂಡಿಯಾ' ಸಪ್ತಾಹಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಮುಂಬೈ ಬಾಂದ್ರ ಕುಲಾ ಕಾಂಪ್ಲೆಕ್ಸ್ ನ ಎಂಎಂಆರ್ ಡಿಎ ಮೈದಾನದಲ್ಲಿ ಚಾಲನೆ ನೀಡಿದ್ದಾರೆ.
ಉದ್ಯಮ ವಲಯದಲ್ಲಿ ಭಾರತದ ಸಾಧನೆ ಮತ್ತು ಬಂಡವಾಳ, ಸಂಶೋಧನೆ, ಉತ್ಪಾತದನೆಗಾಗಿ ಪ್ರಸ್ತುತ ಭಾರತದ ಸ್ಥಿತಿಯನ್ನು ಅನಾವರಣಗೊಳಿಸುವ ಸಲುವಾಗಿ ಈ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.
68ಕ್ಕೂ ಹೆಚ್ಚು ದೇಶಗಳು, 17 ಭಾರತದ ರಾಜ್ಯಗಳು ಮೇಕ್ ಇಂಡಿಯಾ ಸಪ್ತಾಹದಲ್ಲಿ ಪಾಲ್ಗೊಳ್ಳುತ್ತಿದ್ದು, ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರ ಜಂಟಿಯಾಗಿ ಮೇಕ್ ಇನ್ ಇಂಡಿಯಾ ಸಪ್ತಾಹವನ್ನು ಹಮ್ಮಿಕೊಂಡಿದೆ. ಸಮಾರಂಭದಲ್ಲಿ ದೇಶ ಹಾಗೂ ವಿದೇಶದ ಹಲವು ಉದ್ಯಮಿಗಳು ಭಾಗವಹಿಸಿದ್ದರು.