ಚೆನ್ನೈ: ಪ್ರವಾಹ ಪ್ರಕ್ರಿಯೆಯಲ್ಲಿ ತಮಿಳುನಾಡು ಸರ್ಕಾರ ಪ್ರತಿಕ್ರಿಯೆ ನಿಧಾನ: ಕೇಂದ್ರ ಸರ್ಕಾರ ಎಂಬ ಶೀರ್ಷಿಕೆ ಅಡಿ ವರದಿ ಪ್ರಸಾರ ಮಾಡಿದ್ದ ಇಂಗ್ಲೀಷ್ ಡೈಲಿ ಪತ್ರಿಕೆ ವಿರುದ್ಧ ತಮಿಳುನಾಡು ಸರ್ಕಾರ ಮಾನಹಾನಿ ದೂರನ್ನು ದಾಖಲಿಸಿದೆ.
ಮೊದಲ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಮುಂದೆ ಸಿಟಿ ಪಬ್ಲಿಕ್ ಪ್ರಾಸಿಕ್ಯೂಟರ್ ನೇರವಿನೊಂದಿಗೆ ರಾಜ್ಯ ಕಂದಾಯ ಸಚಿವ ಆರ್.ವಿ ಉದಯ್ ಕುಮಾರ್ ಅವರು ದೂರು ದಾಖಲಿಸಿದ್ದಾರೆ.
ಫೆಬ್ರವರಿ 2 ರಂದು ಇಂಗ್ಲೀಷ್ ಡೈಲಿ ಪತ್ರಿಕೆ ಈ ವರದಿಯನ್ನು ಪ್ರಸಾರ ಮಾಡಿತ್ತು. ಈ ಸಂಬಂಧ ಪತ್ರಿಕೆಯ ಸಂಪಾದಕ, ಪ್ರಿಂಟರ್ ಮತ್ತು ಪ್ರಕಾಶಕ ಹಾಗೂ ವರದಿಗಾರನ ವಿರುದ್ಧ ದೂರು ದಾಖಲಾಗಿದೆ.