ಪ್ರಧಾನ ಮಂತ್ರಿ ನರೇಂದ್ರ ಮೋದಿ 
ದೇಶ

ಮೇಕ್ ಇನ್ ಇಂಡಿಯಾ ಸಪ್ತಾಹ: ಸುಲಭ ತೆರಿಗೆ ವಿಧಾನದ ಭರವಸೆ ನೀಡಿದ ನರೇಂದ್ರ ಮೋದಿ

ಭಾರತ ದೇಶವನ್ನು ಜಾಗತಿಕ ಉತ್ಪಾದನಾ ವಲಯವನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅವರು ನಿನ್ನೆ ಮುಂಬೈಯಲ್ಲಿ ಮೇಕ್ ಇನ್ ಇಂಡಿಯಾ ಸಪ್ತಾಹವನ್ನು...

ಮುಂಬೈ: ಭಾರತ ದೇಶವನ್ನು ಜಾಗತಿಕ ಉತ್ಪಾದನಾ ವಲಯವನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಅವರು ನಿನ್ನೆ ಮುಂಬೈಯಲ್ಲಿ ಮೇಕ್ ಇನ್ ಇಂಡಿಯಾ ಸಪ್ತಾಹವನ್ನು ಉದ್ಘಾಟಿಸಿ ಉದ್ಯಮಿ ಸಮುದಾಯವನ್ನುದ್ದೇಶಿ ಮಾತನಾಡಿದರು. ಯೋಜನೆ ಮತ್ತು ನಿಯಮಗಳು ಹೆಚ್ಚು ಪಾರದರ್ಶಕವಾಗಿ, ಸ್ಥಿರಬದ್ದವಾಗಿ ಮತ್ತು ಊಹೆಗೆ ನಿಲುಕುವಂತೆ ಸರ್ಕಾರ ನೋಡಿಕೊಳ್ಳಲಿದೆ. ನಾವು ಹಿಂದಿನ ತೆರಿಗೆ ಪದ್ಧತಿಯನ್ನು ಅವಲಂಬಿಸುವುದಿಲ್ಲ. ನಮ್ಮ ಮುಂದಿನ ತೆರಿಗೆ ವಿಧಾನವು ಹೆಚ್ಚು ಪಾರದರ್ಶಕವಾಗಿರುತ್ತದೆ. ಲೈಸೆನ್ಸ್, ಸುರಕ್ಷತೆಯನ್ನು ಇನ್ನಷ್ಟು ಸರಳಗೊಳಿಸುತ್ತೇವೆ ಎಂದು ಹೇಳಿದರು.

ವಿಶ್ವ ಬ್ಯಾಂಕಿನ ಇತ್ತೀಚಿನ ಅಧ್ಯಯನ ಪ್ರಕಾರ, ವ್ಯಾಪಾರ ಕ್ಷೇತ್ರದಲ್ಲಿ ಭಾರತ 12 ರ್ಯಾಂಕ್ ನಷ್ಟು ಜಿಗಿತ ಕಂಡುಬಂದಿದೆ. ಉದ್ದಿಮೆ ವಲಯದ ಕಾರ್ಯವೈಖರಿ ಮತ್ತಷ್ಟು ಸುಗಮವಾಗಲು ಹಲವು ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸುತ್ತಿದೆ. ವ್ಯಾಪಾರ ವಹಿವಾಟುಗಳಿಗೆ ಸಂಬಂಧಪಟ್ಟ ಕೇಸುಗಳ ತ್ವರಿತ ವಿಚಾರಣೆಗೆ ಸರ್ಕಾರ ಒತ್ತು ನೀಡಲಿದೆ. ಹೈಕೋರ್ಟ್ ಗಳಲ್ಲಿ ಪ್ರತ್ಯೇಕ ವಾಣಿಜ್ಯ ನ್ಯಾಯಾಲಯ, ಹೊಸ ಬೌದ್ಧಿಕ ಆಸ್ತಿ ಹಕ್ಕು(ಐಪಿಆರ್ ) ಮತ್ತು ಸಂಸತ್ತಿನಲ್ಲಿ ದಿವಾಳಿತನ ಕಾನೂನನ್ನು ಅಂಗೀಕರಿಸಲಾಗುವುದು ಎಂದು ಹೇಳಿದರು.
ಏಷ್ಯಾ ಖಂಡದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಭಾರತ ಪ್ರಮುಖವಾಗಿದ್ದು, ಇಲ್ಲಿ ಸಾಕಷ್ಟು ಅವಕಾಶಗಳಿವೆ. ಇಲ್ಲಿ ಬಂಡವಾಳ ಹೂಡಿಕೆ ಮಾಡಿದ್ದರ ಎರಡರಷ್ಟನ್ನು ಗಳಿಸಬಹುದು ಎಂದು ಸಮಾರಂಭದಲ್ಲಿ ಹೇಳಿದರು. ಸ್ವೀಡನ್, ಫಿನ್ ಲ್ಯಾಂಡ್ ನ ಪ್ರಧಾನಿಗಳು ಭಾಗವಹಿಸಿದ್ದರು. ಅದರಲ್ಲಿ ಕಳೆದ ಒಂದು ವರ್ಷದಲ್ಲಿ ತಮ್ಮ ಸರ್ಕಾರ ಮಾಡಿದ ಸಾಧನೆಗಳ ಬಗ್ಗೆ ಉದ್ಯಮಿಗಳಿಗೆ ಮನದಟ್ಟು ಮಾಡುವ ಪ್ರಯತ್ನ ಮಾಡಿದರು.

ಭಾರತಕ್ಕೆ ಮೂರು ಪ್ರಮುಖ ವಿಷಯಗಳು ವರದಾನವಾಗಿದೆ. ಪ್ರಜಾಪ್ರಭುತ್ವ, ಜನಸಂಖ್ಯಾ ಶಾಸ್ತ್ರ ಮತ್ತು ಬೇಡಿಕೆ. ಅದಕ್ಕೆ ಅನಿಯಂತ್ರಣವನ್ನೂ ಸೇರಿಸುತ್ತೇವೆ. ಭಾರತದ ಉತ್ಪಾದನಾ ವಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ 2022ಕ್ಕೆ ಭಾರತದ ಅಭಿವೃದ್ಧಿ ದರವನ್ನು ಈಗಿರುವ 12 ಶೇಕಡಾದಿಂದ ಶೇಕಡಾ 25ಕ್ಕೆ ಹೆಚ್ಚಿಸುವುದು ನಮ್ಮ ಗುರಿಯಾಗಿದೆ. ನಮ್ಮ ದೇಶದ ಯುವಕರು ಉದ್ಯೋಗ ಬಯಸುವವರಾಗಬಾರದು ಬದಲಿಗೆ ಉದ್ಯೋಗ ಸೃಷ್ಟಿಸುವವರಾಗಬೇಕು ಎಂದು ಪ್ರಧಾನಿ ಆಶಿಸಿದರು.

ಸ್ವೀಡನ್ ಪ್ರಧಾನಿ ಜೆಲ್ಲ್ ಸ್ಟಿಫನ್ ಲೋವ್ ಫೆನ್ ಮಾತನಾಡಿ, ತಮ್ಮ ದೇಶ ಭಾರತದಲ್ಲಿ ಇಂಧನ, ಪರಿಸರ, ಆರೋಗ್ಯ ಮತ್ತು ರಕ್ಷಣಾ ವಲಯಗಳಲ್ಲಿ ಹೂಡಿಕೆ ಮಾಡಲು ತೀವ್ರ ಆಸಕ್ತಿ ಹೊಂದಿದೆ. ಮೊದಲು ಚೀನಾ ದೇಶದತ್ತ ಜಾಗತಿಕ ಮಟ್ಟದಲ್ಲಿ ರಾಷ್ಟ್ರಗಳು ದೃಷ್ಟಿ ಹರಿಸುತ್ತಿದ್ದವು. ಈಗ ಭಾರತದತ್ತ ಕಣ್ಣು ಹಾಯಿಸುತ್ತಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

SCROLL FOR NEXT