ಕನ್ಹಯ್ಯ ಕುಮಾರ್ 
ದೇಶ

ನನ್ನ ಮಗನನ್ನು ಉಗ್ರ ಎಂದು ಕರೆಯಬೇಡಿ: ಬಂಧಿತ ಕನ್ಹಯ್ಯ ತಾಯಿ

‘ದಯವಿಟ್ಟು ನನ್ನ ಮಗನನ್ನು ಭಯೋತ್ಪಾದಕ ಎಂದು ಕರೆಯಬೇಡಿ’ಎಂದು ದೇಶದ್ರೋಹದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಜವಾಹರಲಾಲ್‌ ನೆಹರೂ...

ಪಾಟ್ನಾ: ‘ದಯವಿಟ್ಟು ನನ್ನ ಮಗನನ್ನು ಭಯೋತ್ಪಾದಕ ಎಂದು ಕರೆಯಬೇಡಿ’ಎಂದು ದೇಶದ್ರೋಹದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ(ಜೆಎನ್‌ಯು) ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್‌ ಅವರ ತಾಯಿ ಮನವಿ ಮಾಡಿದ್ದಾರೆ.
ಇಂದು ಕನ್ಹಯ್ಯ ಕುಮಾರ್ ಬಂಧನದ ಬಳಿಕ ಇದೇ ಮೊದಲ ಬಾರಿಗೆ ಬಿಹಾರದ ಬೆಗುಸಾರಿ ಜಿಲ್ಲೆಯ ಗ್ರಾಮದಿಂದ ಸುದ್ದಿಸಂಸ್ಥೆಗೆ ದೂರವಾಣಿ ಮೂಲಕ ಮಾತನಾಡಿರುವ ಅವರ ತಾಯಿ ಮೀನಾ ದೇವಿ,  ‘ಕನ್ಹಯ್ಯ ಬಂಧನದ ನಂತರ ನಾವು ನಿರಂತರವಾಗಿ ಟಿವಿಯನ್ನು ನೋಡುತ್ತಿದ್ದೇವೆ. ನನ್ನ ಮಗನಿಗೆ ಪೊಲೀಸರು ತುಂಬಾ ಹೊಡೆದಿಲ್ಲ ಎಂದು ಭಾವಿಸುತ್ತೇನೆ. ಆತನ ಬಂಧನದ ನಂತರದ ಪ್ರತಿ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ದಯವಿಟ್ಟು ಆತನನ್ನು ಭಯೋತ್ಪಾದಕ ಎಂದು ಮಾತ್ರ ಕರೆಯಬೇಡಿ. ಕನ್ಹಯ್ಯ ಯಾವತ್ತೂ ನಮಗೆ(ಪಾಲಕರಿಗೆ) ಅಗೌರವ ತೋರಿಲ್ಲ. ದೇಶದ್ರೋಹದ ಕೆಲಸವನ್ನೂ ಆತ ಮಾಡಿಲ್ಲ’ಎಂದು ಹೇಳಿದ್ದಾರೆ. 
ಅಂಗನವಾಡಿ ಸಹಾಯಕಿಯಾಗಿರುವ ಮೀನಾ ದೇವಿ, ಮಗನ ಬಂಧನದ ಸುದ್ದಿಯನ್ನು  ನೆರೆಮನೆಯ ಟಿವಿಯಲ್ಲಿ ನೋಡಿ ತಿಳಿದುಕೊಂಡಿದ್ದಾರೆ. ಆಕೆಯ ತಿಂಗಳ ಸಂಪಾದನೆ ರು. 3,500. ಕನ್ಹಯ್ಯ ಅವರ ಸಹೋದರ ಮಣಿಕಾಂತನೇ ಕುಟುಂಬಕ್ಕೆ ಏಕೈಕ ಆಸರೆ.  ಮೀನಾ ದೇವಿಯ ಪತಿ ಪಾರ್ಶ್ವವಾಯುವಿನಿಂದ ಕಳೆದ 7 ವರ್ಷಗಳಿಂದ  ಹಾಸಿಗೆ ಹಿಡಿದಿದ್ದಾರೆ.
ಇನ್ನು ‘ನನ್ನ ಮಗ ಬಿಜೆಪಿ ವಿರುದ್ಧದ ಹಲವು ಚಳವಳಿಗಳಲ್ಲಿ ಪಾಲ್ಗೊಂಡಿದ್ದ. ಆತನ ಬಂಧನಕ್ಕೆ ಹಿಂದುತ್ವ ರಾಜಕಾರಣವೇ ಕಾರಣ’ಎಂದು ಕನ್ಹಯ್ಯಾ ಅವರ ತಂದೆ ಜೈಶಂಕರ್‌  ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ