ದೇಶ

ಒಪ್ಪಿಗೆಯ ಸೆಕ್ಸ್ ಅಪರಾಧವಲ್ಲ; ಅವರನ್ನು ಬಂಧಿಸಬಾರದು: ಸುಪ್ರೀಂ ಕೋರ್ಟ್ ಸಮಿತಿ ಶಿಫಾರಸು

Sumana Upadhyaya

ನವದೆಹಲಿ: ವಯಸ್ಕರಾದ ಲೈಂಗಿಕ ಕಾರ್ಯಕರ್ತರು ಪರಸ್ಪರ ಒಪ್ಪಿಗೆಯಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಪೊಲೀಸರು ಅವರನ್ನು ಬಂಧಿಸುವುದಾಗಲಿ, ಕಿರುಕುಳ ನೀಡು ವುದಾಗಲಿ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ನ ಸಮಿತಿ ಹೇಳಿದೆ.ವೇಶಾವೃತ್ತಿ ನಡೆಸುವವರ ಕೆಲಸದ ಸ್ಥಿತಿಗತಿ ಸುಧಾರಣೆ ಮತ್ತು ಅವರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಮಿತಿಯು ಕೆಲವು ಶಿಫಾರಸುಗಳನ್ನು ಸಿದ್ಧಪಡಿಸಿದೆ.

2011ರಲ್ಲಿ ರಚಿಸಲ್ಪಟ್ಟ ಸಮಿತಿಯು ಮುಂದಿನ ಮಾರ್ಚ್ ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ. ನಮ್ಮ ದೇಶದಲ್ಲಿ ವೇಶಾವೃತ್ತಿ ಕಾನೂನುಬದ್ಧವಾಗಿದ್ದರೂ ಕೂಡ ಲೈಂಗಿಕ ಕಾರ್ಯಕರ್ತರು ಪೊಲೀಸರಿಂದ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ವೇಶ್ಯಾವಾಸ ಅಥವಾ ವೇಶ್ಯಾಗೃಹ ನಡೆಸುವುದು ಅಕ್ರಮ. ಆದರೆ, ಅದೇ ನೆಪದಲ್ಲಿ ಲೈಂಗಿಕ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ ಎಸಗುವಂತಿಲ್ಲ ಎಂದೂ ಸಮಿತಿ ಹೇಳಿದೆ.

ಜತೆಗೆ, 1956ರ ಅನೈತಿಕ ಕಳ್ಳಸಾಗಣೆ ನಿಯಂತ್ರಣ ಕಾಯ್ದೆಯ ಸೆಕ್ಷನ್ 8ರಡಿ ಬರುವ ಸಾಲಿಸೈಟಿಂಗ್ ಅಂದರೆ ಗಿರಾಕಿಗಳನ್ನು ಆಕರ್ಷಿಸುವುದು ಎಂಬ ಕಲಂನ್ನು ತೆಗೆದುಹಾಕಬೇಕು. ಇದರೆ ದುರ್ಬಳಕೆ ಹೆಚ್ಚಾಗಿರುವ ಕಾರಣ ಈ ಕ್ರಮ ಕೈಗೊಳ್ಳಬೇಕೆಂದು ಸಮಿತಿ ಶಿಫಾರಸು ಮಾಡಿದೆ. ಗಿರಾಕಿಗಳನ್ನು ಲೈಂಗಿಕ ಕ್ರಿಯೆಗೆ ಆಕರ್ಷಿಸುವುದು ಅಪರಾಧವಾಗಿದ್ದು, 6 ತಿಂಗಳು ಜೈಲುಶಿಕ್ಷೆ ಮತ್ತು 500 ರೂಪಾಯಿ ದಂಡ ವಿಧಿಸಲಾಗುತ್ತದೆ.

SCROLL FOR NEXT