ವಿಚಾರವಾದಿ ನರೇಂದ್ರ ದಾಭೋಲ್ಕರ್
ನವದೆಹಲಿ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸನಾತನ ಸಂಸ್ಥೆಯ ಸದಸ್ಯರಾದ ಹೇಮಂತ್ ಶಿಂಧೆ ಮತ್ತು ನೀಲೇಶ್ ಶಿಂಧೆ ಎಂಬುವವರನ್ನು ಸಿಬಿಐ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಿದೆ.
ಹೇಮಂತ್ ಶಿಂಧೆ ಮತ್ತು ನೀಲೇಶ್ ಶಿಂಧೆ ಅವರನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲು ಪುಣೆ ನ್ಯಾಯಾಲಯ ಬುಧವಾರ ಸಿಬಿಐಗೆ ಅನುಮತಿ ನೀಡಿತ್ತು.
ಶಿವಾಜಿ ನಗರ ನಿವಾಸಿ ಹೇಮಂತ್ ಶಿಂಧೆ ಮತ್ತು ಮಂಗಳ್ವಾರ್ ಪೇಟ್ ನಿವಾಸಿ ನೀಲೇಶ್ ಶಿಂಧೆ ಅವರು ನ್ಯಾಯ ಮನೋವಿಜ್ಞಾನದಲ್ಲಿ ಮೌಲ್ಯಮಾಪನ ಮತ್ತು ನ್ಯಾಯ ಹೇಳಿಕೆಯನ್ನು ವಿಶ್ಲೇಷಣೆಯನ್ನು ಮೋಸಗೊಳಿಸುತ್ತಾರೆಂದು ಅನುಮಾನ ಬಂದಿದೆ. ಈ ಹಿನ್ನಲೆಯಲ್ಲಿ ಅವರನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲು ನ್ಯಾಯಾಲಯದಲ್ಲಿ ಮನವಿ ಮಾಡಲಾಗಿತ್ತು. ನ್ಯಾಯಾಲಯ ಸಮ್ಮತಿಸಿದ್ದು, ಅವರನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಮುಂಬೈನಲ್ಲಿರುವ ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಮೂಢನಂಬಿಕೆ ವಿರೋಧಿ ಕಾರ್ಯಕರ್ತ ಹಾಗೂ ಪತ್ರಕರ್ತ ನರೇಂದ್ರ ದಾಭೋಲ್ಕರ್ ಅವರನ್ನು 2013 ಆ.20ರಂದು ಹತ್ಯೆ ಮಾಡಲಾಯಿತು. ಬೈಕ್‌ನಲ್ಲಿ ಬಂದ ಬಂದೂಕುಧಾರಿಗಳು ಸಿಡಿಸಿದ ಗುಂಡುಗಳು ವಾಯುವಿಹಾರಕ್ಕೆ ತೆರಳಿದ್ದ ದಾಭೋಲ್ಕರ್ ಅವರ ಜೀವ ತೆಗೆದಿದ್ದವು.