ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಹೆಣ್ಣು ನಾಯಿ ಮೇಲೆ ರೇಪ್ ಮಾಡಿದ ವಿಕೃತ ಕಾಮುಕ!

ಕಾಮಕ್ಕೆ ಕಣ್ಣಿಲ್ಲ ಎಂದು ಹೇಳುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇಲ್ಲೊಬ್ಬ ವಿಕೃತ ಕಾಮಿ ಹೆಣ್ಣು ನಾಯಿಯನ್ನು ತನ್ನ ಕಾಮಕ್ಕೆ ಬಳಸಿಕೊಂಡಿದ್ದಾನೆ. ಜಗತ್ತಿನಲ್ಲಿ ವಿಕೃತ ಕಾಮಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದಕ್ಕೆ ಉದಾಹರಣೆಯೆಂಬಂತೆ...

ಹೆಣ್ಣು ನಾಯಿ ಮೇಲೆ ರೇಪ್ ಮಾಡಿದ ವಿಕೃತ ಕಾಮುಕ! (ಸಾಂದರ್ಭಿಕ ಚಿತ್ರ)
Manjula VN
Updated On : 19 Feb 2016, 3:12 am
ಕೊಚ್ಚಿ: ಕಾಮಕ್ಕೆ ಕಣ್ಣಿಲ್ಲ ಎಂದು ಹೇಳುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇಲ್ಲೊಬ್ಬ ವಿಕೃತ ಕಾಮಿ ಹೆಣ್ಣು ನಾಯಿಯನ್ನು ತನ್ನ ಕಾಮಕ್ಕೆ ಬಳಸಿಕೊಂಡಿದ್ದಾನೆ. ಜಗತ್ತಿನಲ್ಲಿ ವಿಕೃತ ಕಾಮಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದಕ್ಕೆ ಉದಾಹರಣೆಯೆಂಬಂತೆ  ಕೇರಳದಲ್ಲೊಂದು ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಇಲ್ಲಿನ ವಿಕೃತ ಕಾಮುಕನೊಬ್ಬ ಹೆಣ್ಣು ನಾಯಿಯನ್ನು ಅತ್ಯಾಚಾರ ಮಾಡಿರುವ ಘಟನೆಯೊಂದು ಶುಕ್ರವಾರ ವರದಿಯಾಗಿದೆ. 
ಕೇರಳದಲ್ಲಿ ಘಟನೆ ನಡೆದಿರುವುದಾಗಿ ಹೇಳಲಾಗುತ್ತಿದ್ದು, ಇದರ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡುತ್ತಿದೆ. 2 ನಿಮಿಷಗಳ ಕಾಲ ಇರುವ ಈ ವಿಡಿಯೋವೊಂದರಲ್ಲಿ ವ್ಯಕ್ತಿಯೋರ್ವ ನಾಯಿ ಮೇಲೆ ಅತ್ಯಾಚಾರವೆಸಗುತ್ತಿರುವುದು ಕಂಡು ಬಂದಿದೆ. ಅತ್ಯಾಚಾರ ಮಾಡಿರುವ ವ್ಯಕ್ತಿ ಮಲಯಾಳಂನಲ್ಲಿ ಮಾತನಾಡುತ್ತಿದ್ದು, ಅತ್ಯಾಚಾರವಾಗಿರುವ ನಿರ್ದಿಷ್ಟ ಪ್ರದೇಶದ ಕುರಿತಂತೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. 

Advertisement

Advertisement

ಇದೀಗ ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾಣಿ ಹಕ್ಕುಗಳ ಸಂಘಟನೆಯವರು ಆರೋಪಿಯ ವಿರುದ್ಧ ಕಠಿಣ ಕ್ರಮಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ವಿಡಿಯೋ ಸಂಬಂಧಿಸಿ ದೂರು ದಾಖಲಿಸಿದ್ದಾರೆ. 
ಪ್ರಕರಣ ಸಂಬಂಧ ಮಾತನಾಡಿರುವ ಸಂಘಟನೆ ಅಧ್ಯಕ್ಷರು, ಅತ್ಯಾಚಾರದ ವೇಳೆ ವ್ಯಕ್ತಿ ಮಲಯಾಳಂ ಭಾಷೆಯಲ್ಲಿ ಮಾತನಾಡುತ್ತಿದ್ದು, ಘಟನೆ ಸ್ಥಳವನ್ನು ನೋಡಿದರೆ ಕೇರಳ ರಾಜ್ಯದಲ್ಲಿಯೇ ನಡೆದಿರುವುದಾಗಿ ಶಂಕೆಗಳು ವ್ಯಕ್ತವಾಗುತ್ತಿದೆ. ಅತ್ಯಾಚಾರ ನಡೆಸಿದ ವ್ಯಕ್ತಿಯನ್ನು ಹಿಡಿದುಕೊಟ್ಟವರಿಗೆ ರು. 1 ಲಕ್ಷ ಬಹುಮಾನವನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ. 
ಇದರಂತೆ ಸಂಘಟನೆ ದಾಖಲಿಸಿರುವ ದೂರಿನ ಅನ್ವಯ ಕೇರಳ ರಾಜ್ಯ ಉಪ ಪೊಲೀಸ್ ಆಯುಕ್ತರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments