ದೇಶ

ಭಾರತ- ನೇಪಾಳ ನೈಸರ್ಗಿಕ, ನಾಗರಿಕತೆಯ ಬಾಂಧವ್ಯ ಹೊಂದಿದೆ: ನೇಪಾಳ ಪ್ರಧಾನಿ

Srinivas Rao BV

ನವದೆಹಲಿ: ಭಾರತ- ನೇಪಾಳ ನೈಸರ್ಗಿಕ ಮತ್ತು ನಾಗರಿಕತೆಯ ಬಾಂಧವ್ಯ ಹೊಂದಿದೆ ಎಂದು ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ಹೇಳಿದ್ದಾರೆ.
ಭಾರತ ಪ್ರವಾಸದಲ್ಲಿರುವ ನೇಪಾಳ ಪ್ರಧಾನಿ ಇತ್ತೀಚಿನ ವರದಿ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಇದಕ್ಕೂ ಮುನ್ನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದ್ದ ಓಲಿ, ಭಾರತ- ನೇಪಾಳ ನೈಸರ್ಗಿಕ ಮತ್ತು ನಾಗರಿಕತೆಯ ಬಾಂಧವ್ಯ ಹೊಂದಿದೆ ಎಂದು ಹೇಳಿರುವುದನ್ನು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.  
2011 ರ ನಂತರ ಇದೇ ಮೊದಲ ಬಾರಿಗೆ ನೇಪಾಳ ಪ್ರಧಾನಿ ಭಾರತಕ್ಕೆ ಭೇಟಿ ನೀಡಿ ಪ್ರಧಾನಿಯೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿದ್ದಾರೆ. 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನೇಪಾಳ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲ ಆಗಮಿಸಿದ್ದರು.
ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ, ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮುನ್ನ ನೇಪಾಳ ಪ್ರಧಾನಿಗೆ ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ ಸ್ವಾಗತ ಕೋರಲಾಯಿತು.

SCROLL FOR NEXT