ದೇಶ

ಶಾಲೆಗಳಲ್ಲಿ ಯೋಗ ಒಲಂಪಿಯಾಡ್ ಆಯೋಜಿಸಲು ಕೇಂದ್ರ ಸರ್ಕಾರ ಚಿಂತನೆ

Sumana Upadhyaya

ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನವಾದ ಜುಲೈ 21ನ್ನು ಈ ವರ್ಷ ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಇದಕ್ಕೆ ಈಗಾಗಲೇ ಭರದ ಸಿದ್ಧತೆ ಆರಂಭಿಸಿದೆ. ಯೋಗ, ಆಸನಗಳನ್ನು ಶಾಲಾ ಮಕ್ಕಳಲ್ಲಿ ಹೆಚ್ಚು ಪ್ರೋತ್ಸಾಹಗೊಳಿಸಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಯೋಗ ಒಲಂಪಿಯಾಡ್ ಆಯೋಜಿಸುವಂತೆ ಕೇಳಿಕೊಂಡಿದೆ ಎಂದು ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ತಿಳಿಸಿದ್ದಾರೆ.

ರಾಜ್ಯದ ಶಾಲೆಗಳಲ್ಲಿ ಯೋಗ ಮತ್ತು ಆಸನಗಳನ್ನು ಹೇಳಿಕೊಡಲು ಪ್ರಮುಖ ತಾಂತ್ರಿಕ ನೆರವು ಮತ್ತು ಮಾರ್ಗದರ್ಶನ ನೀಡುವಂತೆ ಯೋಗ ಸಂಸ್ಥೆಗಳಿಗೆ ಮನವಿ ಮಾಡಲಾಗುವುದು. ಆಯಾ ರಾಜ್ಯ ಸರ್ಕಾರಗಳ ಅಡಿಯಲ್ಲಿಯೇ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ದೇಶದ ಪ್ರತಿ ಜಿಲ್ಲೆಗಳಲ್ಲಿ ಒಂದು ತಿಂಗಳ ಯೋಗ ತರಬೇತಿ ಕಾರ್ಯಕ್ರಮ ನೀಡುವಂತೆ ಸರ್ಕಾರೇತರ ಸಂಸ್ಥೆಗಳನ್ನು ಕೋರಲಾಗುವುದು. ಇದಕ್ಕಾಗಿ ಆ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಹಣವನ್ನು ಒದಗಿಸಲಿದೆ ಎಂದು ತಿಳಿಸಿದರು.

ಕಳಪೆ ಮಟ್ಟದ ಔಷಧಿ: ದೇಶಾದ್ಯಂತ ಅನೇಕ ಮೆಡಿಕಲ್ ಗಳಲ್ಲಿ ಕಳಪೆ ಗುಣಮಟ್ಟದ ಮತ್ತು ನಕಲಿ ಆಯುಷ್ ಔಷಧಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಸಂಸತ್ತಿನ ಪ್ರತಿ ಅಧಿವೇಶನದಲ್ಲಿ ಕೂಡ ಈ ಬಗ್ಗೆ ಸಂಸದರು ಪ್ರಶ್ನೆ ಎತ್ತುತ್ತಾರೆ. ಕಂಪೆನಿಗಳು ಜಾಹೀರಾತಿನಲ್ಲಿ ಜನರನ್ನು ತಪ್ಪು ದಾರಿಗೆಳೆಯುತ್ತಿವೆ. ಇದು ನಮ್ಮ ಗಮನಕ್ಕೂ ಬಂದಿದೆ. ಔಷಧ ಮತ್ತು ಅರಿವು ಕಾಯ್ದೆ ಪ್ರಕಾರ, ಆಯುಷ್ ಔಷಧಿಗಳ ಗುಣಮಟ್ಟವನ್ನು ಕಾಪಾಡುವುದು ಶಾಸನಬದ್ಧ ಅಗತ್ಯವಾಗಿದೆ ಎಂದು  ಸಚಿವರು ಹೇಳಿದರು.

SCROLL FOR NEXT