ನರೇಂದ್ರ ಮೋದಿ 
ದೇಶ

ಟೀ ಮಾರುವವನು ಪ್ರಧಾನಿಯಾಗಿದ್ದನ್ನು ಸಹಿಸದೇ, ನನ್ನನ್ನು ಮುಗಿಸಲು ಸಂಚು ನಡೆಸಿದ್ದರು: ಮೋದಿ

ಒಬ್ಬ ಟೀ ಮಾರುವವನು ದೇಶದ ಪ್ರಧಾನಿಯಾಗಿರುವುದನ್ನು ಒಪ್ಪಿಕೊಳ್ಳಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆಲವು ಸರ್ಕಾರೇತರ ಸೇವಾ ಸಂಸ್ಥೆಗಳು ಒಟ್ಟಾಗಿ ನನ್ನ ಸರ್ಕಾರವನ್ನು ಅಸ್ಥಿರಗೊಳಿಸಲು...

ಒಡಿಶಾ: ಒಬ್ಬ ಟೀ ಮಾರುವವನು ದೇಶದ ಪ್ರಧಾನಿಯಾಗಿರುವುದನ್ನು ಒಪ್ಪಿಕೊಳ್ಳಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆಲವು ಸರ್ಕಾರೇತರ ಸೇವಾ ಸಂಸ್ಥೆಗಳು ಒಟ್ಟಾಗಿ ನನ್ನ ಸರ್ಕಾರವನ್ನು ಅಸ್ಥಿರಗೊಳಿಸಲು ಬಯಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಒಡಿಸ್ಸಾದಲ್ಲಿ ಪ್ರಧಾನ ಮಂತ್ರಿ ಭೀಮಾ ಫಸಲ್  ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ನಾನು ಪ್ರಯತ್ನಿಸುತ್ತಿರುವ ಕಾರಣ, ನಾನಾ ಶಕ್ತಿಗಳು ಒಂದಾಗಿ ನನ್ನನ್ನು ಮುಗಿಸಲು ಷಡ್ಯಂತ್ರ ನಡೆಸುತ್ತಿವೆ ಎಂದು ಹೇಳಿದ್ದಾರೆ.

ಫೆಮಾ ಕಾಯಿದೆ ಉಲ್ಲಂಘನೆಗಾಗಿ ನಿಷೇಧಕ್ಕೊಳಗಾಗಿರುವ ಎನ್‌ಜಿಒಗಳು ಹಾಗೂ ಕಾಳಸಂತೆಕೋರರು ಒಟ್ಟಾಗಿ ಸಂಚು ರೂಪಿಸಿದ್ದಾರೆ. ಹಗಲಿರುಳೂ ನನ್ನ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಸರಕಾರ ಬೀಳಿಸಲು ಹೊಂಚು ಹಾಕುತ್ತಿದ್ದಾರೆ. ನನ್ನ ಹೆಸರಿಗೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ,'' ಎಂದು ಮೋದಿ ಆರೋಪಿಸಿದ್ದಾರೆ.

ಇಂತಹ ಗೊಡ್ಡು ಬೆದರಿಕೆಗೆ ಹೆದರಿ ತಲೆ ಬಾಗುವುದಿಲ್ಲ. ಈ ದೇಶವನ್ನು ದೋಚಲು ಎಂದಿಗೂ ಬಿಡುವುದಿಲ್ಲ. ಜನ ನೀಡಿದ ಕೆಲಸ ನಿರ್ವಹಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಮೋದಿ ಸವಾಲು ಹಾಕಿದ್ದಾರೆ.

ವಿದೇಶಗಳಿಂದ ದೇಶದ ಸಾವಿರಾರು ಎನ್‌ಜಿಒಗಳಿಗೆ ಭಾರಿ ಹಣ ಹರಿದುಬರುತ್ತಿದೆ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ಎಷ್ಟು ಹಣ ಬಂತು ಎಂಬ ಲೆಕ್ಕ ಕೊಡಿ ಎಂದು ಕೇಳಿದ್ದಕ್ಕೆ ಎನ್‌ಜಿಒಗಳು ತಿರುಗಿಬಿದ್ದಿವೆ. ಲೆಕ್ಕದ ಬಗ್ಗೆ ನಾವು ಪ್ರಶ್ನಿಸಿದಾಗಿನಿಂದಲೂ ಅವರ ಪಾಲಿಗೆ ನಾವು ಶತ್ರಗಳಾಗಿದ್ದೇವೆ. ಎನ್‌ಜಿಒಗಳೆಲ್ಲ ಸೇರಿ 'ಮೋದಿಗೆ ಹೊಡೆಯಿರಿ' (ಮೋದಿ ಕೊ ಮಾರೊ) ಎಂದು ಕೂಗಾಡುತ್ತಿವೆ. ಅವರು ಲೆಕ್ಕ ಕೊಡಬೇಕಾದದ್ದು ಕಾನೂನು. ಅದರಂತೆ ನಡೆಯಿರಿ ಎಂದು ನಾವು ಹೇಳಿದ್ದೇ ತಪ್ಪಾಯಿತೇ?,'' ಎಂದು ಅವರು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!

Delhi SIR: ಕ್ಷೇತ್ರ ಪರಿಶೀಲನೆ ಬಳಿಕ ಎಲ್.ಕೆ. ಅಡ್ವಾಣಿ, ಜಗದೀಪ್ ಧನಕರ್, ಜೈಶಂಕರ್ ಸೇರಿ ಹಲವು ಗಣ್ಯರ Voter ID ಗೊಂದಲಕ್ಕೆ ತೆರೆ!

ಮಧ್ಯಪ್ರದೇಶ: ಕಿರಿಯ ವಿದ್ಯಾರ್ಥಿಗೆ ಬೆಲ್ಟ್‌ನಿಂದ ಹೊಡೆತ; ಕೈ ಸುಟ್ಟು ದೌರ್ಜನ್ಯ!

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ