ದೇಶ

ಮಲತಾಯಿ ಇಂದ್ರಾಣಿ ಬೆದರಿಕೆ ಹಾಕಿದ್ದನ್ನು ರಾಹುಲ್ ಪೀಟರ್ ಗೆ ತಿಳಿಸಿದ್ದ: ಸಿಬಿಐ

Mainashree
ನವದೆಹಲಿ: ಮಲತಾಯಿ ಇಂದ್ರಾಣಿ ಮುಖರ್ಜಿಯಿಂದ ತನಗೆ ಕೊಲೆ ಬೆದರಿಕೆ ಇರುವುದನ್ನು ರಾಹುಲ್ ತನ್ನ ತಂದೆ ಪೀಟರ್ ಮುಖರ್ಜಿಗೆ ತಿಳಿಸಿದ್ದ ಎಂದು ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ಶೀನಾ ಬೋರಾ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಬಿಐ, ಹೆಚ್ಚುವರಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಆರೋಪ ಪಟ್ಟಿಯಲ್ಲಿ  ಇಂದ್ರಾಣಿ ಮುಖರ್ಜಿ ತನ್ನ ಮೊದಲ ಪತಿ ಮಗಳು ಶೀನಾ ಬೋರಾ ಮತ್ತು ಪೀಟರ್ ಮುಖರ್ಜಿ ಮಗ ರಾಹುಲ್ ಗೆ ಬೆದರಿಕೆ ಹಾಕಿದ್ದಳು ಎಂದು ಸಿಬಿಐ ಹೇಳಿದೆ. 
ಗೆಳತಿ ಶೀನಾ ಬೋರಾ ಕೊಲೆಯಾಗುವುದಕ್ಕೂ ಒಂದು ವರ್ಷದ ಮುಂಚೆ ರಾಹುಲ್, ತನ್ನ ತಂದೆಗೆ ಇಮೇಲ್ ಮಾಡಿದ್ದು, ಅದರಲ್ಲಿ ತನಗೆ ಮಲತಾಯಿ ಇಂದ್ರಾಣಿಯಿಂದ ಕೊಲೆ ಬೆದರಿಕೆ ಇದೆ ಎಂದು ತಿಳಿಸಿದ್ದಾನೆ. ಶೀನಾ ಮತ್ತು ರಾಹುಲ್ ಗೆ ಜೀವ ಬೆದರಿಕೆ ಹಾಕಿದ್ದರಿಂದ ಅವರು ಎಲ್ಲಾ ಇಮೇಲ್ ಮತ್ತು ಸಾಕ್ಷ್ಯಗಳನ್ನು ಸುರಕ್ಷಿತಗೊಳಿಸಿದ್ದರು ಎಂದು ಸಿಬಿಐ ತಿಳಿಸಿದೆ. 
2011 ಏಪ್ರಿಲ್ 13ರಂದು ಪೀಟರ್ ಮುಖರ್ಜಿಗೆ ರಾಹಲ್ ಇಮೇಲ್ ಕಳುಹಿಸಿದ್ದಾನೆ. ಇಂದ್ರಾಣಿ ಸಾಕಷ್ಟು ಬಾರಿ ರಾಹುಲ್ ನನಗೆ ಜೀವ ಬೆದರಿಕೆ ಹಾಕಿದ್ದಾಳೆ. ಜೀವ ಬೆದರಿಕೆ ಹಾಕಿರುವುದರ ಬಗ್ಗೆ ಹೊರಗಡೆ ಬಾಯ್ಬಿಟ್ಟರೇ, ನನಗೆ ಮತ್ತು ಶೀನಾಗೆ ಏನು ಬೇಕಾದರೂ ಆಗಬಹುದು ಎಂದು ಇಂದ್ರಾಣಿ ಹೇಳಿದ್ದಾಳೆ. ಹಾಗಾಗಿ, ನಾನು ಎಲ್ಲಾ ಮೇಲ್ ಗಳು, ಸಂದೇಶಗಳನ್ನು ದಾಖಲಿಸುವ ಮೂಲಕ ನಮ್ಮಿಬ್ಬರನ್ನು ರಕ್ಷಿಸಿಕೊಳ್ಳ ಬೇಕಾಗಿದೆ ಎಂದು ರಾಹುಲ್ ಮೇಲ್ ಮಾಡಿದ್ದಾನೆ.
SCROLL FOR NEXT