ಸಾಂದರ್ಭಿಕ ಚಿತ್ರ 
ದೇಶ

ವಿಮಾನದ ಗಗನಸಖಿಯರಂತೆ ರೈಲಿನಲ್ಲೂ ಬರಲಿದ್ದಾರೆ ರೈಲ್ವೆ ಸಖಿಯರು

ರಯಾಣಿಕರ ಸೌಲಭ್ಯ ನೋಡಿಕೊಳ್ಳಲು ವಿಮಾನಯಾನದಲ್ಲಿ ಗಗನಸಖಿಯರಿರುವಂತೆ ಎಕ್ಸ್ ಪ್ರೆಸ್ ರೈಲುಗಳಲ್ಲಿ ಸಖಿಯನ್ನು ನೇಮಿಸಲು ಭಾರತೀಯ...

ನವದೆಹಲಿ: ಪ್ರಯಾಣಿಕರ ಸೌಲಭ್ಯ ನೋಡಿಕೊಳ್ಳಲು ವಿಮಾನಯಾನದಲ್ಲಿ ಗಗನಸಖಿಯರಿರುವಂತೆ ಎಕ್ಸ್ ಪ್ರೆಸ್ ರೈಲುಗಳಲ್ಲಿ ಸಖಿಯನ್ನು ನೇಮಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ದೆಹಲಿ- ಆಗ್ರಾ ನಡುವೆ ಗಂಟೆಗೆ 160 ಕಿ,ಮೀ ಪ್ರತಿ ಗಂಟೆ ವೇಗದಲ್ಲಿ ಸಂಚರಿಸುವ ಗತಿಮಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಾರ್ಯನಿರ್ವಹಿಸಲು  ರೈಲ್ವೆ ಹೋಸ್ಟೆಸ್ ರನ್ನು ಶೀಘ್ರವೇ ನೇಮಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಲಿದೆ. ಫೆ.25ರಂದು ಮಂಡನೆಯಾಗಲಿರುವ ರೈಲ್ವೆ ಬಜೆಟ್‌ನಲ್ಲಿ ಸಚಿವ ಸುರೇಶ್‌ಪ್ರಭು ಇದನ್ನು ಘೋಷಿಸಲಿದ್ದಾರೆ.

ಈ ಏಕ್ಸ್ ಪ್ರೆಸ್ ರೈಲಿನಲ್ಲಿ ಟಿವಿ ಸೇವೆ, ಅಪಾಯ ಸೂಚನೆ ವ್ಯವಸ್ಥೆ, ತುರ್ತು ಪರಿಸ್ಥಿತಿಯಲ್ಲಿ ಬ್ರೇಕಿಂಗ್ ವ್ಯವಸ್ಥೆ, ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ,ಕೇಟರಿಂಗ್ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳು ಇರಲಿವೆ. ಒಂದು ತಾಸಿಗೆ 160 ಕಿ.ಮೀ. ಓಡುವ 5,4000 ಎಚ್ ಪಿ ಇಂಜಿನ್ ವಾಹನದಲ್ಲಿ 12 ಕೋಚುಗಳಿರುತ್ತದೆ. ಶತಾಬ್ದಿ ಏಕ್ಸ್ ಪ್ರೆಸ್ 200 ಕಿಲೋ ಮೀಟರ್ ಅಂತರವನ್ನು 120 ನಿಮಿಷಗಳಲ್ಲಿ ಕ್ರಮಿಸಿದರೆ, ಗತಿಮಾನ್ ಎಕ್ಸ್ ಪ್ರೆಸ್ 105 ನಿಮಿಷಗಳಲ್ಲಿ ಕ್ರಮಿಸುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೈಟ್ ಶಿಫ್ಟ್ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಎದುರಾಯ್ತು ಸಾವು: ತಿರುಪತಿಯ ಫಾರ್ಮಾ ಘಟಕದಲ್ಲಿ ಸಿಡಿದ ಬಾಯ್ಲರ್, ಐವರು ಕಾರ್ಮಿಕರು ಸಾವು!

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

ಏಷ್ಯನ್ ಗೇಮ್ಸ್ 2026 ಫೈನಲ್: ವೈಭವ್ ಸೂರ್ಯವಂಶಿ ಅಣಕಿಸಿದ ಪಾಕ್ ಸ್ಟಾರ್ ಆಟಗಾರ! ಏನು ಮಾಡಿದ್ರು ಗೊತ್ತಾ? Video

'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ

ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕ, ಕ್ಷಣಮಾತ್ರದಲ್ಲಿ ಎಚ್ಚೆತ್ತ RPF ಕಾನ್‌ಸ್ಟೆಬಲ್, ರಕ್ಷಣೆ-Video