ರಾಷ್ಟ್ರದ್ರೋಹ ಪ್ರಕರಣ ಹಿಂಪಡೆಯುವುದು ನಮ್ಮ ಕೈಯಲ್ಲಿಲ್ಲ: ಜೆಎನ್ ಯು
ನವದೆಹಲಿ: ಜೆಎನ್ ಯು ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ವಿರುದ್ಧ ದಾಖಲಾಗಿರುವ ರಾಷ್ಟ್ರದ್ರೋಹ ಪ್ರಕರಣವನ್ನು ಹಿಂಪಡೆಯುವುದು ಹಾಗೂ ಆತನನ್ನು ಬಿಡುಗಡೆಗೊಳಿಸುವುದಾವುದು ನಮ್ಮ ಕೈಯಲ್ಲಿಲ್ಲ ಎಂದು ಜೆಎನ್ ಯು ಮಂಗಳವಾರ ಹೇಳಿದೆ.
ಪ್ರಕರಣ ಸಂಬಂಧ ಮಾತನಾಡಿರುವ ಜೆಎನ್ ಯು ರಿಜಿಸ್ಟ್ರಾರ್ ಭುಪಿಂದರ್ ಝುತ್ಶಿ ಅವರು, ನಾವು ಕನ್ಹಯ್ಯ ಕುಮಾರ್'ನನ್ನು ಬಂಧಿಸಿಲ್ಲ. ನಾವು ಯಾರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣವನ್ನು ದಾಖಲಿಸಿಲ್ಲ. ಪ್ರಕರಣ ಸಂಬಂಧ ಕ್ರಮ ಕೈಗೊಂಡಿರುವುದು ಪೊಲೀಸರು ಹಾಗೂ ನ್ಯಾಯಾಲಯ. ಎರಡೂ ವಿಚಾರಗಳು ನಮ್ಮ ನಿಯಂತ್ರಣದಲ್ಲಿಲ್ಲ ಎಂದು ಹೇಳಿದ್ದಾರೆ.
ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ನಿನ್ನೆಯಷ್ಟೇ ಕನ್ಹಯ್ಯ ಹಾಗೂ ವಿವಿಯ ಮತ್ತೈವರ ವಿರುದ್ಧ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣ ಸಂಬಂಧ ಹಲವಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ವಿವಿ ಉಪ ಕುಲಪತಿ ಜಗದೀಶ್ ಕುಮಾರ್ ಅವರು ವಿದ್ಯಾರ್ಥಿಗಳ ಪರವಾಗಿ ನಿಂತು ಪ್ರಕರಣವನ್ನು ಹಿಂಪಡೆದು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದರು.
ಇದರಂತೆ ವಿವಿಯ ಪ್ರಾಂಶುಪಾಲರ ನೇತೃತ್ವದಲ್ಲಿ ಜೆಎನ್ ಯು ಅಧಿಕಾರಿಗಳು ನಿನ್ನೆ ಸಭೆಯನ್ನು ನಡೆಸಿದ್ದರು. ಪ್ರಕರಣ ಸಂಬಂಧ ಆರೋಪಗಳು ಎಂದು ಹೇಳಲಾಗುತ್ತಿರುವ ಐವರು ವಿದ್ಯಾರ್ಥಿಗಳನ್ನು ಪೊಲೀಸರ ವಿವಿಗೆ ಬಂದು ಬಂಧಿಸುತ್ತಾರೋ ಅಥವಾ ವಿದ್ಯಾರ್ಥಿಗಳೇ ಶರಣಾಗುವಂತೆ ಸೂಚಿಸುತ್ತಾರೆಂಬುದರ ಕುರಿತಂತೆ ಯಾವುದೇ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲಾಗಿರಲಿಲ್ಲ.
ಇದರಂತೆ ಮಾತನಾಡಿರುವ ಭುಪಿಂದರ್ ಅವರು, ವಿದ್ಯಾರ್ಥಿಗಳ ಬಂಧನ ಕುರಿತಂತೆ ಪೊಲೀಸರು ಈ ವರೆಗೂ ನಮ್ಮನ್ನು ಸಂಪರ್ಕಿಸಿಲ್ಲ. ಈ ಬಗ್ಗೆ ನಮ್ಮ ಬಳಿ ಅನುಮತಿಯನ್ನು ಕೇಳಿಲ್ಲ. ನಾವು ಕೂಡ ಪೊಲೀಸರ ಈ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos