ದೇಶ

ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಸ್ಥಾನಕ್ಕೆ ನ್ಯಾ.ಎಚ್.ಎಲ್ ದತ್ತು

Mainashree
ನವೆದೆಹಲಿ: ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಮೂರ್ತಿ ಎಚ್ ಎಲ್ ದತ್ತು ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮುಂದಿನ ಅಧ್ಯಕ್ಷರಾಗಲಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ(ಎನ್ ಎಛ್ ಆರ್ ಸಿ) ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕ ಮೂಲದ ದತ್ತು(ಹಂದ್ಯಾಳ ಲಕ್ಷ್ಮೀನಾರಾಯಣಸ್ವಾಮಿ ದತ್ತು) ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿ ಅಂತಿಮಗೊಳಿಸಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅನುಮೋದನೆಗಾಗಿ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ. 
ನ್ಯಾ.ಕೆ.ಜಿ ಬಾಲಕೃಷ್ಣನ್ ಅವರು ಕಳೆದ ವರ್ಷದ ಮೇ ತಿಂಗಳಿನಲ್ಲಿ ತಮ್ಮ ಅವಧಿ ಪೂರಅಣಗೊಳಿಸಿದ ನಂತರ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನ ಖಾಲಿ ಬಿದ್ದಿತ್ತು. ಕಳೆದ ವರ್ಷ ಎಚ್ ಎಲ್ ದತ್ತು ಅವರು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು. 
ಮಾನವ ಹಕ್ಕುಗಳ ಸಂರಕ್ಷಣಾ ಕಾಯ್ದೆ, 1993ರಡಿ ಮಾನವ ಹಕ್ಕು ಆಯೋಗದ ಅಧ್ಯ ಮತ್ತು ಸದಸ್ಯರನ್ನು ಪ್ರಧಾನಿ ನೇತೃತ್ವದ ಸಮಿತಿ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ನೇಮಿಸುತ್ತಾರೆ. ಅವರು ನೇಮಿಸುವವರು ಮುಂದಿನ 5 ವರ್ಷಗಳ ಅವಧಿಗೆ ಎನ್ ಎಚ್ ಆರ್ ಸಿ ಅಧ್ಯಕ್ಷರಾಗಿ ಮುಂದುವರಿಸುತ್ತಾರೆ.
65 ವರ್ಷದ ಎಚ್ ಎಲ್ ದತ್ತು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಮೂರ್ತಿಯಾಗಿ 2014ರ ಸೆ.28ರಿಂದ 2015ರ ಡಿಸೆಂಬರ್ 2ರವರೆಗೆ ಕಾರ್ಯನಿರ್ವಹಿಸಿದ್ದರು.
SCROLL FOR NEXT