ಏಸು ಕ್ರಿಸ್ತ 
ದೇಶ

ಏಸುಕ್ರಿಸ್ತ ತಮಿಳು ಹಿಂದೂ; ಕ್ರಿಸ್ತ್ ಪರಿಚಯ್ ಪುಸ್ತಕದಲ್ಲಿ ಉಲ್ಲೇಖ

ಏಸು ಕ್ರಿಸ್ತ ತಮಿಳು ಹಿಂದೂ ಆಗಿದ್ದನು. ಆತ ವಿಶ್ವಕರ್ಮ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದು, ಕ್ರೈಸ್ತ ಧರ್ಮವು ಹಿಂದೂ ಧರ್ಮದ ಒಂದು ಭಾಗವಾಗಿದೆ...

ಮುಂಬೈ: ಏಸು ಕ್ರಿಸ್ತ ತಮಿಳು ಹಿಂದೂ ಆಗಿದ್ದನು. ಆತ ವಿಶ್ವಕರ್ಮ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದು, ಕ್ರೈಸ್ತ ಧರ್ಮವು ಹಿಂದೂ ಧರ್ಮದ ಒಂದು ಭಾಗವಾಗಿದೆ ಎಂದು 'ಕ್ರಿಸ್ತ್ ಪರಿಚಯ್‌' ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಆರೆಸ್ಸೆಸ್‌ನ ಸಂಸ್ಥಾಪಕರಲ್ಲೊಬ್ಬರಾದ ವಿನಾಯಕ್ ದಾಮೋದರ್ (ವೀರ್) ಸಾವರ್ಕರ್ ಅವರ ಅಣ್ಣ  ಗಣೇಶ್ ದಾಮೋದರ್ (ಬಾಬಾರಾವ್ ) ಸಾವರ್ಕರ್ 1946ರಲ್ಲಿ ಬರೆದ ಕ್ರಿಸ್ತ್ ಪರಿಚಯ್ ಪುಸ್ತಕವನ್ನು ಇದೀಗ ಮುಂಬೈ ಮೂಲದ ಬಲಪಂಥೀಯ ಸಂಘಟನೆ ಮರು ಪ್ರಕಟಣೆ ಮಾಡಲು ಮುಂದಾಗಿದೆ.
ಸ್ವಾತಂತ್ರ್ಯ ವೀರ್ ಸಾವರ್ಕರ್ ರಾಷ್ಟ್ರೀಯ ಸ್ಮಾರಕ್ ಸಂಘಟನೆಯು ಮರಾಠಿಯಲ್ಲಿ ಬರೆದಿರುವ ಈ ಪುಸ್ತಕವನ್ನು ಫೆ. 26ರಂದು ಲೋಕಾರ್ಪಣೆ ಮಾಡಲಿದೆ.
ಕ್ರಿಸ್ತನ ಹುಟ್ಟಿದ ಸ್ಥಳ ಯಾವುದು ಎಂಬುದು ಈ ಪುಸ್ತಕದಲ್ಲಿ ನಿಖರವಾಗಿ ಹೇಳಲಿಲ್ಲ. ಆದರೆ  ಪಾಲೆಸ್ತೀನ್ ಮತ್ತು ಅರಬ್ ಗಡಿಭಾಗಗಳು ಹಿಂದೂ ಭೂಮಿಯಾಗಿದ್ದು, ಕ್ರಿಸ್ತ ಭಾರತಕ್ಕೆ ಬಂದಿದ್ದನು ಎಂದು ಹೇಳಲಾಗಿದೆ.
ಮಿಡ್ ಡೇ ಪತ್ರಿಕೆಯ ವರದಿ ಪ್ರಕಾರ ಕ್ರಿಸ್ತ್ ಪರಿಚಯ್ ಪುಸ್ತಕದಲ್ಲಿರುವ ಕೆಲವು ವಿಷಯಗಳು ಇಂತಿವೆ
  • ಏಸುಕ್ರಿಸ್ತ  ತಮಿಳು ಹಿಂದುವಾಗಿದ್ದ
  • ಆತನ ನಿಜನಾಮ ಕೇಶವೊ ಕೃಷ್ಣಾ ಆಗಿತ್ತು
  • ಆತನ ಮಾತೃಭಾಷೆ ತಮಿಳು ಆಗಿತ್ತು
  • ಆತನ ಮೈ ಬಣ್ಣ ಕಪ್ಪು
  • ಬ್ರಾಹ್ಮಣ ಸಂಪ್ರದಾಯದಂತೆ ಕ್ರಿಸ್ತ  12ರ ಹರೆಯದವನಿದ್ದಾಗ ಆತನಿಗೆ ಉಪನಯನ ಆಗಿತ್ತು
  • ಭಾರತೀಯ ಸಂಸ್ಕೃತಿಯಂತೆ ಆತನ ಕುಟುಂಬದ ವೇಷ ಭೂಷಣವಿತ್ತು
  • ಕೈಸ್ತ ಧರ್ಮ ಎನ್ನುವುದು ಪ್ರತ್ಯೇಕ ಧರ್ಮ ಆಗಿರಲಿಲ್ಲ. ಅದು ಹಿಂದೂ ಧರ್ಮದಿಂದಲೇ ಹುಟ್ಟಿಕೊಂಡಿದ್ದು.
  • ಇಸಾಯಿ (ಕ್ರೈಸ್ತ) ಸಂಸ್ಕೃತಿಗೆ ಸೇರಿದವರು ಯೋಗ ಮತ್ತು ಧಾರ್ಮಿಕ ವಿಜ್ಞಾನವನ್ನು ಕರಗತ ಮಾಡಿಕೊಂಡಿದ್ದರು. ಇದರಿಂದಾಗಿಯೇ ಕ್ರಿಸ್ತನು ಶಿಲಬೆಗೇರಿಯೂ ಬದುಕಿದ. ಕ್ರಿಸ್ತನು ಗಿಡಮೂಲಿಕೆಗಳನ್ನೂ ಬಳಸುತ್ತಿದ್ದು, ಇದರಿಂದಾಗಿ ಆತ ಚೇತರಿಸಿಕೊಳ್ಳುವಂತಾಯಿತು.
  • ಆತ ತನ್ನ ಜೀವನದ ಕೊನೆಯ ಘಟ್ಟವನ್ನು ಹಿಮಾಲಯದಲ್ಲಿ ಕಳೆದಿದ್ದ .
  • ಆರೋಗ್ಯ ಚೇತರಿಸಿಕೊಂಡ ನಂತರ ಆತ ಹಿಮಾಲಯದ ತಪ್ಪಲಿನಲ್ಲಿ (ಕಾಶ್ಮೀರದಲ್ಲಿ ಆಗಿರುವ ಸಾಧ್ಯತೆ) ಆತ ಮಠ ಸ್ಥಾಪಿಸಿದ. ಆತ ಅಲ್ಲಿ 3 ವರ್ಷಗಳ ಕಾಲ ಶಿವನನ್ನು ಧ್ಯಾನಿಸಿ, ಶಿವನ ದರ್ಶನ ಪಡೆದ.
  • ಕ್ರಿಸ್ತ ದೇಹ ತ್ಯಾಗ ಮಾಡಿದಾಗ ಆತನ ವಯಸ್ಸು 49. ಆತ ಯೋಗಮುದ್ರೆಯಲ್ಲಿ ಕುಳಿತು ಸಮಾಧಿಯಾಗಿದ್ದ. 
  • ಅರೇಬಿಯಾ ಹಿಂದೂ ಭೂಮಿಯಾಗಿದ್ದು, ಯೆಹೂದಿಯರು ಹಿಂದೂಗಳಾಗಿದ್ದಾರೆ
  • ಅರೆಬಿಕ್ ನಲ್ಲಿ ಹಲವಾರು ಸಂಸ್ಕೃತ ಮತ್ತು ತಮಿಳು ಪದಗಳಿವೆ
  • ಪ್ಯಾಲೆಸ್ತೀನ್‌ನ ಅರೆಬಿಕ್ ಭಾಷೆಯು ತಮಿಳು ಭಾಷೆಯ ಭಾಗವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT