ದೇಶ

ರೋಹಿತ್ ವೇಮುಲಾ ಸಹೋದರನಿಗೆ ಸರ್ಕಾರಿ ನೌಕರಿ ನೀಡಲು ಕೇಜ್ರಿವಾಲ್ ಗೆ ಮನವಿ

Srinivas Rao BV

ನವದೆಹಲಿ: ಆತ್ಮಹತ್ಯೆಗೆ ಮಾಡಿಕೊಂಡ ಹೈದರಾಬಾದ್ ವಿವಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಕುಟುಂಬ ಸದಸ್ಯರು ರೋಹಿತ್ ನ ಸಹೋದರನಿಗೆ ಸರ್ಕಾರಿ ನೌಕರಿ ನೀಡಬೇಕೆಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಮನವಿ ಮಾಡಿದ್ದಾರೆ.
ರೋಹಿತ್ ವೇಮುಲಾ ಕುಟುಂಬಕ್ಕೆ ಆದಾಯದ ಮೂಲ ಇಲ್ಲವಾದ ಕಾರಣ, ಆತನ ಸಹೋದರನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ ಎಂದು ದೆಹಲಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸಹಾನುಭೂತಿಯ ಆಧಾರದಲ್ಲಿ ರೋಹಿತ್ ಕುಟುಂಬ ಸದಸ್ಯರ ಮನವಿಯನ್ನು ಪರಿಗಣಿಸಲಾಗುತ್ತದೆ ಎಂದು ಕೇಜ್ರಿವಾಲ್ ಭರವಸೆ ನೀಡಿದ್ದಾರೆ. ಈ ಬಗ್ಗೆ ದೆಹಲಿ ಸಂಪುಟ ಫೆ.25 ರ ನಂತರ ನಿರ್ಧಾರ ಕೈಗೊಳ್ಳಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾದ ಕಾರಣ ರೋಹಿತ್ ವೇಮುಲಾ ಸೇರಿದಂತೆ ಹೈದರಾಬಾದ್ ವಿವಿಯ 7 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿತ್ತು. ಈ ಘಟನೆಯಾದ ಬಳಿಕ ಹೈದರಾಬಾದ್ ವಿವಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಜ.17 ರಂದು ಅತ್ಮಹೆತ್ಯೆ ಮಾಡಿಕೊಂಡಿದ್ದರು.

SCROLL FOR NEXT