ದೇಶ

ಜನ ಗಣ ಮನ ರಾಷ್ಟ್ರಗೀತೆಯಾಗಿ ಎಂದಿಗೂ ಉಳಿಯಬಹುದು ಎಂಬ ಖಚಿತತೆ ಇಲ್ಲ: ತನಿಕಾ ಸರ್ಕಾರ್

Sumana Upadhyaya

ನವದೆಹಲಿ: ನಮ್ಮ ದೇಶದ ರಾಷ್ಟ್ರ ಗೀತೆಯನ್ನು ಬದಲಿಸಲು ಪ್ರಯತ್ನಗಳು ನಡೆಯುತ್ತಿದ್ದು, ಜನ ಗಣ ಮನದ ಬದಲಾಗಿ ವಂದೇ ಮಾತರಂ ಗೀತೆಯನ್ನು ರಾಷ್ಟ್ರಗೀತೆಯಾಗಿ ಮಾಡಬೇಕು ಎಂಬ ಒತ್ತಾಯ ಬಲ ಪಂಥೀಯ ಗುಂಪಿನಿಂದ ಕೇಳಿಬರುತ್ತಿದೆ ಎಂದು ಇತಿಹಾಸಕಾರ ತನಿಕಾ ಸರ್ಕಾರ್ ಹೇಳಿದ್ದಾರೆ.

ಬಲ ಪಂಥೀಯರು ಅನೇಕ ವರ್ಷಗಳಿಂದ ವಂದೇ ಮಾತರಂನ್ನು ರಾಷ್ಟ್ರಗೀತೆಯಾಗಿ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಜನ ಗಣ ಮನ ಎಂದೆಂದಿಗೂ ರಾಷ್ಟ್ರಗೀತೆಯಾಗಿ ಉಳಿಯಬಹುದು ಎಂಬ ಭರವಸೆಯಿಲ್ಲ ಎಂದು ಅವರು ಹೇಳಿದರು. ಸರ್ಕಾರ್ ಜೆಎನ್ ಯು ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಆಗಿದ್ದು, ಅಲ್ಲಿನ ವಿದ್ಯಾರ್ಥಿಗಳಿಗೆ ನಿನ್ನೆ ಉಪನ್ಯಾಸವೊಂದರಲ್ಲಿ ತಿಳಿಸಿದರು.

ಉಗ್ರಗಾಮಿ ಅಫ್ಜಲ್ ಗುರುವಿಗೆ ಮರಣದಂಡನೆ ಶಿಕ್ಷೆ ನೀಡಿರುವುದನ್ನು ವಿರೋಧಿಸಿ ಕಾರ್ಯಕ್ರಮವೊಂದನ್ನು ಜೆಎನ್ ಯು ವಿಶ್ವವಿದ್ಯಾಲಯದ ಗುಂಪು ಆಯೋಜನೆ ಮಾಡಿದ್ದಕ್ಕಾಗಿ ವಿಶ್ವವಿದ್ಯಾಲಯವನ್ನು ದೇಶ ವಿರೋಧಿ ಎಂದು ಬಿಂಬಿಸಿರುವುದನ್ನು ಪ್ರತಿಭಟಿಸಿ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯತೆ ಎಂಬ ಹೆಸರಿನಲ್ಲಿ ಸರಣಿ ಹೊರಾಂಗಣ ಉಪನ್ಯಾಸ ನಡೆಯುತ್ತಿದೆ. ಅದರಲ್ಲಿ ತನಿಕಾ ಸರ್ಕಾರ್ ಐದನೇ ಭಾಷಣಕಾರರಾಗಿ ಮಾತನಾಡಿದರು.

ಇದೇ ಸರಣಿ ಉಪನ್ಯಾಸ ಆರಂಭದಲ್ಲಿ ಭಾಷಣ ಮಾಡಿ ದೇಶದ್ರೋಹದ ಆರೋಪದ ಮೇಲೆ ಜೆಎನ್ ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕನ್ಹಯ್ಯ ಕುಮಾರ್ ಬಂಧಿಸಲ್ಪಟ್ಟಿದ್ದರು.
ಜೆಎನ್ ಯುನಲ್ಲಿ ನಡೆಯುತ್ತಿರುವ ರಾಷ್ಟ್ರೀಯತೆ ಕುರಿತ ಉಪನ್ಯಾಸದಲ್ಲಿ ದೇಶದ ಅನೇಕ ವಿಶ್ವವಿದ್ಯಾಲಯಗಳ ಉಪನ್ಯಾಸಕರು ಭಾಗವಹಿಸುತ್ತಿದ್ದಾರೆ.

SCROLL FOR NEXT