ದೆಹಲಿಯಲ್ಲಿನ ಶೇ.50 ಅತ್ಯಾಚಾರಕ್ಕೆ ಜೆಎನ್‌ಯು ವಿದ್ಯಾರ್ಥಿಗಳೇ ಜವಾಬ್ದಾರಿ: ಬಿಜೆಪಿ ಶಾಸಕ 
ದೇಶ

ದೆಹಲಿಯಲ್ಲಿನ ಶೇ.50 ಅತ್ಯಾಚಾರಕ್ಕೆ ಜೆಎನ್‌ಯು ವಿದ್ಯಾರ್ಥಿಗಳೇ ಜವಾಬ್ದಾರಿ: ಬಿಜೆಪಿ ಶಾಸಕ

ಇತ್ತೀಚೆಗಷ್ಟೇ ಕಾಂಡೋಮ್ ಹಾಗೂ ಮಾದಕ ವಸ್ತುಗಳ ಕುರಿತಂತೆ ಹೇಳಿಕೆ ನೀಡಿ ಹಲವು ಟೀಕೆಗಳಿಗೆ ಗುರಿಯಾಗಿದ್ದ ಬಿಜೆಪಿ ಶಾಸಕ ಇದೀಗ ಮತ್ತೊಂದು ಹೇಳಿಕೆಯನ್ನು ನೀಡಿದ್ದು, ರಾಜಧಾನಿ ದೆಹಲಿಯಲ್ಲಿ ನಡೆಯುವ ಶೇ.50 ರಷ್ಟು ಅತ್ಯಾಚಾರಗಳಿಗೆ...

ನವದೆಹಲಿ: ಇತ್ತೀಚೆಗಷ್ಟೇ ಕಾಂಡೋಮ್ ಹಾಗೂ ಮಾದಕ ವಸ್ತುಗಳ ಕುರಿತಂತೆ ಹೇಳಿಕೆ ನೀಡಿ ಹಲವು ಟೀಕೆಗಳಿಗೆ ಗುರಿಯಾಗಿದ್ದ ಬಿಜೆಪಿ ಶಾಸಕ ಇದೀಗ ಮತ್ತೊಂದು ಹೇಳಿಕೆಯನ್ನು ನೀಡಿದ್ದು, ರಾಜಧಾನಿ ದೆಹಲಿಯಲ್ಲಿ ನಡೆಯುವ ಶೇ.50 ರಷ್ಟು ಅತ್ಯಾಚಾರಗಳಿಗೆ ಜೆಎನ್‌ಯು ವಿವಿಯ ವಿದ್ಯಾರ್ಥಿಗಳೇ ಜವಾಬ್ದಾರಿಯುತರಾಗಿದ್ದಾರೆಂದು ಗುರುವಾರ ಹೇಳಿದ್ದಾರೆ.

ಜೆಎನ್ ಯು ವಿವಾದ ಕುರಿತಂತೆ ನಿನ್ನೆ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಜ್ಞಾನ್ ದೇವ್ ಅಹುಜಾ ಅವರು, ದೆಹಲಿಯಲ್ಲಿ ಆಗುತ್ತಿರುವ ಶೇ.50 ರಷ್ಟು ಭಾಗದ ಅತ್ಯಾಚಾರಗಳಿಗೆ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಜವಾಬ್ದಾರಿಯುತರಾಗಿದ್ದೇರೆಂದು ಹೇಳಿದ್ದಾರೆ. ಈ ಹಿಂದಷ್ಟೇ ವಿವಿ ವಿದ್ಯಾರ್ಥಿಗಳ ಕುರಿತಂತೆ ಹೇಳಿಕೆ ನೀಡಿದ್ದ ಶಾಸಕ ಇದೀಗ ಮತ್ತೆ ವಿದ್ಯಾರ್ಥಿಗಳ ಮೇಲೆ ಆರೋಪಗಲನ್ನು ಮಾಡುತ್ತಿರುವುದು ವಿದ್ಯಾರ್ಥಿಗಳ ಕಣ್ಣು ಮತ್ತಷ್ಟು ಕೆಂಪಗಾಗುವಂತೆ ಮಾಡಿದೆ.

ಕೆಲವು ದಿನಗಳಿ ಹಿಂದಷ್ಟೇ ಜೆಎನ್ ಯು ವಿವಾದ ಕುರಿತಂತೆ ಹೇಳಿಕೆ ನೀಡಿದ್ದ ಅಹುಜಾ ಅವರು, ಜೆಎನ್ ಯು ವಿವಿಯಲ್ಲಿ ಪ್ರತಿದಿನ 2 ಸಾವಿರ ಮದ್ಯದ ಬಾಟಲಿಗಳು, 10 ಸಾವಿರ ಉಪಯೋಗಿಸಿದ ಸಿಗರೇಟ್, 4 ಸಾವಿರ ಬೀಡಿಗಳು, 50 ಸಾವಿರ ಮೂಳೆಗಳು, 2 ಸಾವಿರ ಚಿಪ್ಸ್ ಕವರ್ಗಳು, 3 ಸಾವಿರ ಬಳಕೆಯಾದ ಕಾಂಡೋಮ್ ಗಳು ಹಾಗೂ 500 ಗರ್ಭನಿರೋಧಕ ಚುಚ್ಚು ಮದ್ದುಗಳು ಪತ್ತೆಯಾಗುತ್ತವೆ. ಅಲ್ಲದೆ, ರಾತ್ರಿ 8 ರ ನಂತರ ವಿವಿಯಲ್ಲಿ ಯುವತಿಯರು ಅರೆ ನಗ್ನ ನೃತ್ಯಗಳನ್ನು ಮಾಡುತ್ತಿರುತ್ತಾರೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!