ನಾಪತ್ತೆ ಮಕ್ಕಳು(ಸಾಂದರ್ಭಿಕ ಚಿತ್ರ) 
ದೇಶ

ಪ್ರತಿವರ್ಷ 2.5 ಕೋಟಿ ವೆಚ್ಚ ಮಾಡಿದ್ರು, ಪತ್ತೆಯಾಗದ ಕಣ್ಮರೆಯಾದ 60 ಸಾವಿರ ಮಕ್ಕಳು

ನಾಪತ್ತೆಯಾದ ಮಕ್ಕಳ ಹುಡುಕಾಟಕ್ಕೆ ಸರ್ಕಾರ ಪ್ರತಿ ವರ್ಷ ಸುಮಾರು 2.5 ಕೋಟಿ ಹಣ ವೆಚ್ಚ ಮಾಡುತ್ತಿದ್ದರು. ನಾಲ್ಕು ವರ್ಷದಲ್ಲಿ ಕಣ್ಮರೆಯಾದ 60 ಸಾವಿರ ಮಕ್ಕಳನ್ನು...

ನವದೆಹಲಿ: ನಾಪತ್ತೆಯಾದ ಮಕ್ಕಳ ಹುಡುಕಾಟಕ್ಕೆ ಸರ್ಕಾರ ಪ್ರತಿ ವರ್ಷ ಸುಮಾರು 2.5 ಕೋಟಿ ಹಣ ವೆಚ್ಚ ಮಾಡುತ್ತಿದ್ದರು. ನಾಲ್ಕು ವರ್ಷದಲ್ಲಿ ಕಣ್ಮರೆಯಾದ 60 ಸಾವಿರ ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.

ಜನವರಿ 2012ರಿಂದ ಫೆಬ್ರವರಿ 2016ರ ಅವಧಿಯಲ್ಲಿ ದೇಶಾದ್ಯಂತ 1,94,213 ಮಕ್ಕಳು ಕಣ್ಮರೆಯಾಗಿದ್ದರೆ. ಆ ಪೈಕಿ 1,29,270 ಮಕ್ಕಳು ಹೆತ್ತವರನ್ನು ಸೇರಿದ್ದಾರೆ. ಇಳಿದಂತೆ 64,943 ಮಕ್ಕಳು ಪತ್ತೆಯಾಗಿಲ್ಲ. ಮಕ್ಕಳು ಕಣ್ಮರೆಯಾಗಲು ಅಪಹರಣ, ಮಾನವ ಕಳ್ಳಸಾಗಣೆ, ಅಕ್ರಮ ದತ್ತು ಹಾಗೂ ನೈಸರ್ಗಿಕ ವಿಕೋಪ ಕಾರಣ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ 44,095 ಮಕ್ಕಳು ಕಣ್ಮರೆಯಾಗಿದ್ದು, ಇದರಲ್ಲಿ 36,055 ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದ್ದು, 26,008ರಷ್ಟು ಮಕ್ಕಳು ಕಣ್ಮರೆಯಾಗಿದ್ದಾರೆ. ಇದರಲ್ಲಿ 14,646 ಮಕ್ಕಳನ್ನು ಹುಡುಕಲಾಗಿದೆ. ಕಣ್ಮರೆಯಾದ ಮಕ್ಕಳ ಹುಡುಕಾಟಕ್ಕಾಗಿ ಸರ್ಕಾರ ‘ಟ್ರ್ಯಾಕ್ ಚಿಲ್ಡ್ ಹಾಗೂ ಕೋಯಾ-ಪಾಯಾ’ ವೆಬ್ ಪೋರ್ಟ್​ಲ್ ಅಭಿವೃದ್ಧಿಪಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT