ನವದೆಹಲಿ: ಜಗತ್ತಿನ ಅಗ್ಗದ ಸ್ಮಾರ್ಟ್ ಫೋನ್ ಫ್ರೀಂಡಮ್ 251 ಬುಕ್ ಮಾಡಿ ಮೊಬೈಲ್ ಪಡೆಯುವ ಆಸೆಯಲ್ಲಿದ್ದ ಚಂದದಾರರಿಗೆ ಶಾಕ್ ಎದುರಾಗಿದೆ. ಬುಕ್ ಮಾಡಿ ಹಣ ಸಂದಾಯ ಮಾಡಿದ್ದ 30 ಸಾವಿರ ಮಂದಿಗೆ ಹಣ ಹಿಂತಿರುಗಿಸಿರುವುದಾಗಿ ರಿಂಗಿಂಗ್ ಬೆಲ್ಸ್ ಆಡಳಿತ ನಿರ್ದೇಶಕ ಮೋಹಿತ್ ಗೋಯೆಲ್ ತಿಳಿಸಿದ್ದಾರೆ.
ಫ್ರೀಡಮ್ 251 ಫೋನ್ ಗ್ರಾಹಕರ ಕೈ ತಲುಪಿದ ಬಳಿಕ ಹಣ ಪಡೆಯಲಾಗುವುದು. ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಅನುಮಾನಗಳಿಗೆ ತೆರೆ ಎಳೆಯಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ರಿಂಗಿಂಗ್ ಬೆಲ್ಸ್ ಕಂಪನಿಯ ಅಧ್ಯಕ್ಷ ಅಶೋಕ್ ಚಡ್ಡಾ ಹೇಳಿದ್ದಾರೆ.
25 ಲಕ್ಷ ಮೊಬೈಲ್ಗಳನ್ನು ಜೂನ್ 30 ರೊಳಗೆ ಗ್ರಾಹಕರ ಕೈತಲುಪಿಸುವ ಗುರಿಯನ್ನು ಕಂಪನಿ ಹೊಂದಿದೆ.
ಐಟಿ ದಾಳಿ ಪರಿಣಾಮ ಅಥವಾ ಹೆಚ್ಚಿದ ಒತ್ತಡದಿಂದಾಗಿ ಈಗಾಗಲೇ ಬುಕಿಂಗ್ ಮಾಡಿದ್ದ ಮೊದಲ 30 ಸಾವಿರ ಮಂದಿಗೆ ಹಣ ಹಿಂತಿರುಗಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.