ದೇಶ

ನನಗೂ ಪರೀಕ್ಷೆಯಿದೆ: ಪ್ರಧಾನಿ ಮೋದಿ

Manjula VN

ನವದೆಹಲಿ: ಇತರರೊಂದಿಗೆ ಪೈಪೋಟಿ ಮಾಡುವುದನ್ನು ಬಿಟ್ಟು, ನಿಮ್ಮೊಂದಿಗೆ ನೀವೇ ಪೈಪೋಟಿ ಮಾಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್ ನಲ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಇಂದು ನಡೆಯುತ್ತಿರುವ 17ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತನಾಡುತ್ತಿದ್ದು, ಮೋದಿಯವರಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾಗೂ ಚೆಸ್ ಆಟಗಾರ ವಿಶ್ವನಾಥ್ ಆನಂದ್ ಅವರು ಸಾಥ್ ನೀಡಿದ್ದಾರೆ.

ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಮಾತನಾಡಲು ಆರಂಭಿಸಿದ ಮೋದಿಯವರು, ನನಗೆ ಗೊತ್ತಿದೆ ಮಕ್ಕಳ ಪರೀಕ್ಷೆ ಬಗ್ಗೆ ಯೋಚನೆಗಳು ಆರಂಭವಾಗಿದೆ ಅಥವಾ ಆರಂಭವಾಗುತ್ತಿದೆ ಎಂದು. ನಿಮ್ಮ ಮಕ್ಕಳ ಪರೀಕ್ಷೆ ಬಗ್ಗೆ ನನಗೂ ಕಾಳಜಿ ಇದೆ. ಪರೀಕ್ಷೆ ಬಗೆಗಿನ ನಮ್ಮ ದೃಷ್ಟಿಕೋನವನ್ನು ನಾವು ಬದಲಿಸಿಕೊಂಡರೆ, ಒತ್ತಡದಿಂದ ಮುಕ್ತರಾಗುತ್ತೇವೆ. ಇದಕ್ಕೆ ಸ್ಫೂರ್ತಿ ನೀಡಲು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಸಚಿನ್ ತೆಂಡೂಲ್ಕರ್ ಅವರು ಮಾತುಗಳನ್ನು ಕೇಳಿ ಎಂದು ಹೇಳಿದ್ದಾರೆ.

ನಂತರ ಮಾತನಾಡಿದ ಸಚಿನ್ ತೆಂಡೂಲ್ಕರ್ ಅವರು, ಯಾವಾಗಲೂ ಧನಾತ್ಮಕವಾಗಿ ಹಾಗೂ ಕೇಂದ್ರೀಕೃತವಾಗಿ ಆಲೋಚನೆ ಮಾಡಿ. ಆ ಆಲೋಚನೆಯೇ ನೀವು ಗುರಿಯನ್ನು ಮುಟ್ಟುವಂತೆ ಮಾಡುತ್ತದೆ. ನಿಮ್ಮ ಮೇಲೆ ನಿಮ್ಮ ಪೋಷಕರು, ಶಿಕ್ಷಕರು, ಸಂಬಂಧಿಕರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿರುತ್ತಾರೆ. ಅದನ್ನು ಸುಳ್ಳು ಮಾಡಬಾರದು. ಮೊದಲು ಏನೇ ಮಾಡಬೇಕಾದರು ಒಂದು ಗುರಿಯೆಂಬುದನ್ನು ಇಟ್ಟುಕೊಳ್ಳಬೇಕು. ಆ ಗುರಿಯನ್ನು ಸಾಧಿಸಲು ಅದಕ್ಕೆಬೇಕಾದ ತಯಾರಿಯನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ವಿಶ್ವನಾಥ್ ಆನಂದ್ ಮಾತನಾಡಿ, ಶಾಂತಿಚಿತ್ತತೆಯಿಂದಿರಿ. ಅತಿಯಾದ ಅತ್ಮವಿಶ್ವಾಸದಾಯಿಗಳಾಗದಿರಿ ಹಾಗೂ ನಿರಾಶಾವಾದಿಗಳಾಗದಿರಿ ಎಂದು ಹೇಳಿದರು.

ನಂತರ ಮಾತನಾಡಿದ ಮೋದಿಯವರು, ಸಚಿನ್ ಅವರಿಂದ ಸ್ಪೂರ್ತಿ ಪಡೆದುಕೊಂಡಿದ್ದೀರ ಎಂದು ತಿಳಿಯುತ್ತೇನೆ. ನೀವು ಏನೇ ಮಾಡಬೇಕಾದರೂ ಇತರರೊಂದಿಗೆ ಪೈಪೋಟಿ ಮಾಡುವುದಕ್ಕಿಂತ ನಮ್ಮೊಂದಿಗೆ ನೀವೇ ಪೈಪೋಟಿ ಮಾಡಿ. ಪರೀಕ್ಷಿಯಿಂದ ಏನಾಗುತ್ತದೆ ಎಂದು ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಬೇಡಿ. ನಿಮ್ಮಿಂದ ಸಾಧ್ಯವಾಗುವಷ್ಟು ಪ್ರಯತ್ನವನ್ನು ನೀವು ಮಾಡಿದ. ಪ್ರತಿ ದಿನ ನೀವು ಯಾವ ರೀತಿಯಲ್ಲಿ ಕೆಲಸ ಮಾಡುತ್ತೀರಿ ಎಂಬುದು ನಿಮ್ಮ ಪರೀಕ್ಷಿಯ ಮೇಲೆ ಪರಿಣಾಮ ಬೀರುತ್ತದೆ. ಅದು ಮುಖ್ಯವಾದದ್ದು.

ಶಿಸ್ತು ಜೀವನದ ಮೂಲ ಅಡಿಪಾಯವಾಗಿರುತ್ತದೆ. ಪ್ರತಿ ಯಶಸ್ಸಿನ ಹಿಂದೆಯೂ ಶಿಸ್ತು ಬಹಳ ಮುಖ್ಯವಾದದ್ದು. ನಾನು ಸಾಕಷ್ಟು ವಿಧಧ ವಿದ್ಯಾರ್ಥಿಗಳನ್ನು ನೋಡಿದ್ದೇನೆ. ಅದರಲ್ಲಿ ಎರಡು ರೀತಿಯ ವಿದ್ಯಾರ್ಥಿಗಳಿದ್ದಾರೆ. ಒಂದು ಇತರರ ಶಕ್ತಿಯನ್ನು ನೋಡಿ ತಮ್ಮ ಶಕ್ತಿ ಬಗ್ಗೆ ಆಲೋಚಿಸುವವರು. ಎರಡನೇ ಅವರು ತಮ್ಮ ಶಕ್ತಿ ಬಗ್ಗೆ ಶಂಕಿಸಿ ಯಾವಾಗಲೂ ಚಿಂತಿಸುವವರು.

ನಮ್ಮ ಮಿದುಳು ಶಾಂತವಾಗಿಟ್ಟುಕೊಂಡರೆ ಪರೀಕ್ಷೆ ಸುಲಭವಾಗುತ್ತದೆ. ಪರೀಕ್ಷೆ ಮುಗಿಯುತ್ತಿದ್ದಂತೆ ಇಷ್ಟು ಅಂಕ ಬರುತ್ತದೆ, ಅಷ್ಟು ಅಂಕಗಳು ಬರುತ್ತದೆ ಎಂದು ಚಿಂತಿಸುತ್ತಿರುತ್ತಾರೆ. ಇದನ್ನು ಮಾಡಬೇಡಿ. ಹಿಂದೆ ಏನಾಗಿದೆಯೋ ಅದನ್ನು ಮರೆತುಬಿಡಿ. ನಮ್ಮ ಒಳ್ಳೆಯ ಸಮಯವನ್ನು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಕಳೆಯಬೇಕು. ಪರೀಕ್ಷೆ ಬರೆಯುವುದಕ್ಕೂ ಮುನ್ನ ಮೊದಲು ನಿರ್ದೇಶನಗಳನ್ನು ಗಮನವಿಟ್ಟು ಓದಿ. ನಂತರ ಪರೀಕ್ಷೆಯನ್ನು ಬರೆಯಿರಿ.

ಇತ್ತೀಚಿನ ದಿನಗಳಲ್ಲಿ ಪರೀಕ್ಷೆ ಎಂಬುದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ. ಪೋಷಕರಿಗೂ ಆಗಿಬಿಟ್ಟಿದೆ. ಯಶಸ್ಸು ಯಾವ ಸಮಯದಲ್ಲಿ ಬೇಕಾದರೂ ಗಳಿಸಬಹುದು ಎಂಬುದಕ್ಕೆ ಜೆಕೆ. ರೌಲಿಂಗ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ರೌಲಿಂಗ್ ಅವರು ಕೂಡ ತಮ್ಮ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ನೋಡಿದ್ದಾರೆ. ದಯವಿಟ್ಟು ಮಕ್ಕಳಿಗೆ ಒತ್ತವನ್ನು ನೀಡಬೇಕಿ. ಅವರಿಗೆ ಧನಾತ್ಮಕ ಪರಿಸರವನ್ನು ಸೃಷ್ಟಿಸಿ ಎಂದು ಹೇಳಿದ್ದಾರೆ.

ಕುತೂಹಲವೆನ್ನುವುದು ವಿಜ್ಞಾನದ ತಾಯಿಯಿದ್ದಂತೆ. ವಿಜ್ಞಾನ ಹಾಗೂ ತಾಂತ್ರಜ್ಞಾನವಿಲ್ಲದೆಯೇ ಆವಿಷ್ಕಾರ ಸಾಧ್ಯವಿಲ್ಲ. ಇಂದು ರಾಷ್ಟ್ರೀಯ ವಿಜ್ಞಾನ ದಿನ. ಎಲ್ಲಾ ವಿಜ್ಞಾನಿಗಳಿ ರಾಷ್ಟ್ರೀಯ ವಿಜ್ಞಾನ ದಿನದ ಶುಭಾಶಯಗಳು. ಮೇಕ್ ಇನ್ ಇಂಡಿಯಾ, ವಿಜ್ಞಾನ ಮತ್ತು ತಂತ್ರಜ್ಞಾನಗಳು ಹೊಸ ಆವಿಷ್ಕಾರದ ಮೂಲಕ ಚಾಲನೆಯಲ್ಲಿದೆ. ನಾಳೆ ನನ್ನ ಪರೀಕ್ಷೆ ಇದೆ. ಅಂದರೆ ಕೇಂದ್ರ ಬಜೆಟ್. ನಾನು ಬರೆಯಲಿರುವ ಪರೀಕ್ಷೆಯನ್ನು 125 ಕೋಟಿ ಜನರು ನೋಡಲಿದ್ದಾರೆ ಎಂದು ಹೇಳಿದ್ದಾರೆ.

ಇದರಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಾಧ್ಯಾಪಕ ಸಿಎನ್ಆರ್ ರಾವ್ ಅವರು, ಪರೀಕ್ಷೆ ವೇಳೆ ಭಯ ಹುಟ್ಟುವುದು ನನಗೆ ನೆನಪಾಗುತ್ತಿದೆ. ಇದೇ ಭಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಆಗುತ್ತದೆ. ಅದರ ಬಗ್ಗೆ ಯೋಚನೆ ಮಾಡಬೇಡಿ. ನಿಮ್ಮಿಂದ ಸಾಧ್ಯವಾಗುವ ಪ್ರಯತ್ನವನ್ನು ನೀವು ಮಾಡಿ. ಇಂದು ದೇಶದಲ್ಲಿ ಸಾಕಷ್ಟು ಆಯ್ಕೆಗಳಿವೆ. ಜೀವನದಲ್ಲಿ ಏನು ಮಾಡಬೇಕೆಂಬುದನ್ನು ಅವರೇ ನಿರ್ಧರಿಸಬೇಕಿದೆ. ಯಾವುದೇ ಕಾರಣಕ್ಕೂ ಆಗುವುದಿಲ್ಲ ಎಂದು ಆಲೋಚಿಸಬೇಡಿ ಎಂದು ಹೇಳಿದ್ದಾರೆ.

ಮಾರ್ಚ್ 1 ರಿಂದ ಏಪ್ರಿಲ್ 24 ರವರೆಗೆ ದ್ವಿತೀಯ ಪಿಯುಸಿ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗುತ್ತಿದ್ದು, ಕೋಟ್ಯಾಂತರ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಧೃಡಗೆಡದಿರುವುದಾಗಿ ಹೇಳಿ ಪ್ರಧಾನಿ ಮೋದಿಯವರು ಮನ್ ಕಿ ಬಾತ್ ಮಾತನಾಡಿದ್ದಾರೆ.

SCROLL FOR NEXT