ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಇನ್ನೂ ಪತ್ತೆಯಾಗದ ಶಾಸಕ 
ದೇಶ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಇನ್ನೂ ಪತ್ತೆಯಾಗದ ಶಾಸಕ

ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ ಎದುರಿಸುತ್ತಿರುವ ಆರ್ ಜೆಡಿ ಶಾಸಕ ರಾಜ್ ಬಲ್ಲಭ್ ಯಾದವ್ ಇನ್ನೂ ತಲೆಮರೆಸಿಕೊಂಡಿದ್ದು, ಬಿಹಾರ ಪೊಲೀಸರು ಭಾನುವಾರ ಶಾಸಕನ ಆಸ್ತಿಗೆ ಮುಟ್ಟುಗೋಲು ಹಾಕಿರುವುದಾಗಿ ತಿಳಿದುಬಂದಿದೆ...

ಪಾಟ್ನ; ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ ಎದುರಿಸುತ್ತಿರುವ ಆರ್ ಜೆಡಿ ಶಾಸಕ ರಾಜ್ ಬಲ್ಲಭ್ ಯಾದವ್ ಇನ್ನೂ ತಲೆಮರೆಸಿಕೊಂಡಿದ್ದು, ಬಿಹಾರ ಪೊಲೀಸರು ಭಾನುವಾರ ಶಾಸಕನ ಆಸ್ತಿಗೆ ಮುಟ್ಟುಗೋಲು ಹಾಕಿರುವುದಾಗಿ ತಿಳಿದುಬಂದಿದೆ.

150ಕ್ಕೂ ಹೆಚ್ಚು ಪೊಲೀಸರು ಇದೀಗ ಯಾದವ್ ನಿವಾಸದ ಬಳಿ ಬೀಡು ಬಿಟ್ಟಿದ್ದು, ಶಾಸಕನಿಗೆ ಸಂಬಂಧಪಟ್ಟ ಆಸ್ತಿಗೂ ಮುಟ್ಟುಗೋಲು ಹಾಕಿದ್ದಾರೆ. ಅಲ್ಲದೆ, ಆರ್ ಜೆಡಿ ಪಕ್ಷ ಚಿಹ್ನೆಗಳನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.

ಅತ್ಯಾಚಾರ ಪ್ರಕರಣವನ್ನು ನಿನ್ನೆ ವಿಚಾರಣೆ ನಡೆಸಿದ್ದ ಪಾಟ್ನ ನ್ಯಾಯಾಲಯವು ತಲೆಮರೆಸಿಕೊಂಡಿರುವ ಶಾಸಕನ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಸೂಚನೆ ನೀಡಿತ್ತು. ನ್ಯಾಯಾಲಯದ ಆದೇಶವನ್ನು ಪರಿಪಾಲಿಸಿರುವ ಪೊಲೀಸರು ಇದೀಗ ಶಾಸಕನ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.

ಫೆ.6 ರಂದು ಹುಟ್ಟುಹಬ್ಬದ ಆಚರಣೆಯಿಂದೆ ಎಂದು ಹೇಳಿ ಸುಲೇಖ ದೇವಿ ಎಂಬ ಮಹಿಳೆಯ ಬಾಲಕಿಯೊಬ್ಬಳನ್ನು ಆರ್ ಜೆಡಿ ಶಾಸಕ ಬಲ್ಲಭ್ ಯಾದವ್ ಅವರ ನಿವಾಕಕ್ಕೆ ಕರೆದುಕೊಂಡು ಹೋಗಿದ್ದಾಳೆ. ಈ ವೇಳೆ ಬಾಲಕಿಯನ್ನು ಶಾಸಕನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದಾಳು. ವಿಚಾರ ತಿಳಿದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆಸಿದ್ದರು. ಇಲ್ಲದೆ, ಪ್ರಕರಣ ಸಂಬಂಧ ಬಾಲಕಿಯ ಕುಟುಂಬದ ನಾಲ್ವರು ಸದಸ್ಯರನ್ನು ಬಂಧಿಸಿದ್ದರು. ನಂತರ ಶಾಸಕ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವುದಾಗಿ ಆರೋಪಗಳು ಕೇಳಿಬಂದಿದ್ದವು. ಇದೀಗ ಪ್ರಕರಣ ಸಂಬಂಧ ಶಾಸಕ ತಲೆ ಮರೆಸಿಕೊಂಡಿದ್ದು, ಶಾಸಕನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲರು!

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

Chhattisgarh: ಹೊಲದಿಂದ ಮನೆಗೆ ಮರಳುತ್ತಿದ್ದ ಮಹಿಳೆಗೆ ಸಿಡಿಲು ಬಡಿದು ಸಾವು, Video

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!