ನವದೆಹಲಿ: ಕಳೆದ ಬಾರಿ ನೀರಸ ಬಜೆಟ್ ಮಂಡಿಸುವ ಮೂಲಕ ಫೇಲ್ ಆಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಬಾರಿಯ ಸಂಪ್ಲಿಮೆಂಟರಿಯಲ್ಲಿ ಪಾಸ್ ಆಗ್ತಾರಾ ನೋಡೋಣ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಹೇಳಿದ್ದಾರೆ.
ಕೇಂದ್ರದಲ್ಲಿ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿಲಿದ್ದು, ಈ ಕುರಿತಂತೆ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕಳೆದ ಬಾರಿ ಎನ್ ಡಿಎ ಸರ್ಕಾರ ನೀರಸ ಬಜೆಟ್ ಮಂಡಿಸುವ ಮುಖಾಂತರ ಜನರು ನಿರಾಶೆಯಾಗುವಂತೆ ಮಾಡಿತ್ತು. ಕಳೆದ ಬಾರಿ ಫೇಲ್ ಆಗಿದ್ದ ಮೋದಿ ಅವರು ಈ ಬಾರಿಯಾದರೂ ಪಾಸ್ ಆಗುತ್ತಾರಾ ನೋಡೋಣ ಎಂದು ಹೇಳಿದ್ದಾರೆ
ಮೋದಿ ಸರ್ಕಾರದ ಬಜೆಟ್ ಮೇಲೆ ಜನರಿಗೆ ಅಪಾರವಾದ ನಿರೀಕ್ಷೆಗಳಿವೆ. ಕಳೆದ ಬಾರಿ ಮಂಡಣೆಯಾದ ಬಜೆಟ್ ನಲ್ಲಿ ಬಡವರಿಗೆ ನೆರವಾಗುವಂತಹ ಯಾವುದೇ ಯೋಜನಗಳಿರಲಿಲ್ಲ. ಈ ಬಾರಿಯಾದರೂ ಉಪಯೋಗವಾಗುತ್ತಾ ನೋಡೋಣ. ಮೋದಿಯವರು ಜನ ಸಾಮಾನ್ಯರಿಗೆ ನೆರವಾಗುವಂತಹ ಬಜೆಟ್ ಮಂಡಿಸಬೇಕು ಎಂದು ಹೇಳಿದ್ದಾರೆ.