ದೇಶ

ಚಡ್ಡಿಯಲ್ಲಿ ಕುಳ್ಳಿರಿಸಿ ಪರೀಕ್ಷೆ: ಸೇನಾ ಮುಖ್ಯಸ್ಥರಿಂದ ವಿವರಣೆ ಕೇಳಿದ ರಕ್ಷಣಾ ಸಚಿವಾಲಯ

Sumana Upadhyaya

ಮುಜಾಫರ್ ನಗರ(ಬಿಹಾರ): ಸೇನೆಯಲ್ಲಿ ಕ್ಲರ್ಕ್ ನೇಮಕಾತಿಗೆ ಅಭ್ಯರ್ಥಿಗಳನ್ನು ಬಟ್ಟೆ ಬಿಚ್ಚಿ ಚಡ್ಡಿಯಲ್ಲಿ ಮಾತ್ರ ಮೈದಾನದಲ್ಲಿ ಕುಳಿತುಕೊಂಡು ಪರೀಕ್ಷೆ ಬರೆಸಿದ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ರಕ್ಷಣಾ ಸಚಿವಾಲಯ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಅವರಿಗೆ ಘಟನೆಯ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ. ರಕ್ಷಣಾ ಸಚಿವಾಲಯದಿಂದ ವಿವರಣೆ ಕೋರಿ ಬಿಹಾರ ಹೈಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಚಿವಾಲಯ ಈ ಕ್ರಮ ಕೈಗೊಂಡಿದೆ.

ಸೇನೆಯ ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಸೇನೆಯ ಸ್ಥಳೀಯ ನಿರ್ದೇಶಕ ಕರ್ನಲ್ ವಿಎಸ್ ಗೋದ್ಹರ, ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ. ಈ ಹಿಂದೆ, ಕೆಲವು ಅಭ್ಯರ್ಥಿಗಳು ಪರೀಕ್ಷೆ ಬರೆಯುವಾಗ ಚೀಟಿಗಳನ್ನು, ಮೊಬೈಲ್ ಫೋನ್ ಗಳನ್ನು ಚಡ್ಡಿಯೊಳಗೆ ಅಡಗಿಸಿಟ್ಟ ಪ್ರಕರಣಗಳು ಕೂಡ ನಡೆದಿವೆ. ಹಾಗಾಗಿ ನಾವು ಈ ಬಾರಿ ಈ ಕ್ರಮ ತೆಗೆದುಕೊಂಡೆವು. ವಾತಾವರಣ ಅಂದು ಉತ್ತಮವಾಗಿದ್ದು, ಪರೀಕ್ಷೆಗೆ ಬರೆದ ಅಭ್ಯರ್ಥಿಗಳಿಗೆ ಕಷ್ಟವಾಗಿರಲಿಕ್ಕಿಲ್ಲ. ಸೇನೆಗೆ ಸೇರುವವರು ದೈಹಿಕ ಪರೀಕ್ಷೆಯಲ್ಲಿ ಹೇಗಿದ್ದರೂ ಚಡ್ಡಿಯಲ್ಲಿ ಪರೀಕ್ಷೆ ಎದುರಿಸುತ್ತಾರಲ್ಲವೇ ಎನ್ನುತ್ತಾರೆ.

ಮೈದಾನದ ಮೇಲೆ ಕತ್ತರಿಯಾಕಾರದಲ್ಲಿ ಕಾಲುಗಳನ್ನಿಟ್ಟುಕೊಂಡು ತೊಡೆಯ ಮೇಲೆ ಪೇಪರ್ ಇಟ್ಟು ಅಭ್ಯರ್ಥಿಗಳು ಒಂದು ಗಂಟೆಯ ಪರೀಕ್ಷೆ ಬರೆದಿದ್ದರು.

SCROLL FOR NEXT