ನಕ್ಸಲರ ಶರಣಾಗತಿ (ಸಂಗ್ರಹ ಚಿತ್ರ) 
ದೇಶ

ಛತ್ತೀಸ್​ಗಢ: 11 ಮಾವೋವಾದಿ ನಕ್ಸಲೀಯರ ಶರಣಾಗತಿ

ವಿವಿಧ ಕಾರಣಗಳಿಂದಾಗಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ 11 ಮಂದಿ ನಕ್ಸಲೀಯರು ಭಾನುವಾರ ಶರಣಾಗತರಾಗಿದ್ದಾರೆ...

ರಾಯ್ ಪುರ: ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ 11 ಮಂದಿ ನಕ್ಸಲೀಯರು ಭಾನುವಾರ ಶರಣಾಗತರಾಗಿದ್ದಾರೆ.

ನಕ್ಸಲೀಯರನ್ನು ಸಮಾಜದಲ್ಲಿ ಸೇರಿಸುವ ಛತ್ತೀಸ್​ಗಢ ಸರ್ಕಾರ ಕ್ರಮದಿಂದಾಗಿ ಇಂದು ಕೊಂಡಗಾಂವ್ ಜಿಲ್ಲೆಯಲ್ಲಿ 11 ಮಂದಿ ನಕ್ಸಲೀಯರು ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಛತ್ತೀಸ್  ಗಢ ಸರ್ಕಾರದ ಶರಣಾಗತಿ ನೀತಿಯಿಂದ ಪ್ರಭಾವಿತಗೊಂಡು ಮತ್ತು ಸಂಘಟನೆಯ ಹಿರಿಯರು ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದಕ್ಕೆ ಭ್ರಮನಿರಸನಗೊಂಡು ಅವರು  ಶರಣಾಗತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶರಣಾಗತರಾಗಿರುವವರ ಪೈಕಿ ಗಣೇಶ ಕೊರ್ರಂ (23 ವರ್ಷ) ಮತ್ತು ಲಲಿತ್ ಕಶ್ಯಪ್ (22 ವರ್ಷ) ಪ್ರಮುಖರಾಗಿದ್ದು, ಇವರ ತಲೆಗಳಿಗೆ ಸರ್ಕಾರ ತಲಾ 3 ಲಕ್ಷ ರೂಪಾಯಿಗಳ ಬಹುಮಾನ  ಘೊಷಣೆ ಮಾಡಿತ್ತು. ಈ ಇಬ್ಬರು ನಾಯಕರು ಬಸ್ತಾರ್ ಪ್ರದೇಶದಲ್ಲಿ ಮಾವೋವಾದಿ ನಕ್ಸಲೀಯರ ಸಂದೇಶ ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೊಂಡಗಾಂವ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೆ.ಎಸ್. ವಟ್ಟಿ ಅವರು, ಸಂಘಟನೆಯ ಹಿರಿಯ ನಾಯಕರ ಕಿರುಕುಳದಿಂದ ಯುವಕರು  ಭ್ರಮ-ನಿರಸನಗೊಂಡಿದ್ದು, ಛತ್ತೀಸ್​ಗಢ ಸರ್ಕಾರದ ಶರಣಾಗತಿ ನೀತಿಯಿಂದ ಪ್ರಭಾವಿತರಾಗಿದ್ದಾರೆ. ಹೀಗಾಗಿ ಸರ್ಕಾರದ ಮುಂದೆ ಶರಣಾಗಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!