ದೇಶ

ಕಾನೂನು ಅನುಮತಿ ನೀಡಿದರೆ ಅತ್ಯಾಚಾರಿಗಳನ್ನು ಗುಂಡಿಟ್ಟು ಕೊಲ್ಲುವೆ: ಬಿಎಸ್ ಬಸ್ಸಿ

Rashmi Kasaragodu
ನವದೆಹಲಿ: ಕಾನೂನು ಅನುಮತಿ ನೀಡಿದರೆ ಅತ್ಯಾಚಾರಿಗಳನ್ನು ಗುಂಡಿಟ್ಟು ಕೊಲ್ಲುವುದರ ಬಗ್ಗೆ ನಾನು ಮರುಚಿಂತನೆ ಮಾಡಲಾರೆ ಎಂದು  ದೆಹಲಿ ಪೊಲೀಸ್ ಆಯುಕ್ತ ಬಿಎಸ್ ಬಸ್ಸಿ ಹೇಳಿದ್ದಾರೆ.
ದೆಹಲಿಯಲ್ಲಿ ಮಹಿಳೆಯರ ರಕ್ಷಣೆ ಬಗ್ಗೆ ಪೊಲೀಸರು ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಬಸ್ಸಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಿಳೆಯರ ರಕ್ಷಣೆಯನ್ನು  ಮನಗಂಡು ದೆಹಲಿ ನಗರದಲ್ಲಿ  ಒಟ್ಟು 13, 548 ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ. ಅದೇ ವೇಳೆ ಮಹಿಳೆಯರಿಗೆ ರಕ್ಷಣೆ ನೀಡುವ ಬಗ್ಗೆ ನಮ್ಮ ಹಾಗೂ ನಮ್ಮ ಸಮಾಜದ ದೃಷ್ಟಿಕೋನಗಳು ಬದಲಾಗಬೇಕು ಎಂದು ಅವರು ಹೇಳಿದ್ದಾರೆ.
ದೆಹಲಿ ಸರ್ಕಾರದಿಂದ ಸಹಾಯ ಬಯಸುವುದಿಲ್ಲ
ಮಹಿಳೆಯ ರಕ್ಷಣೆ ಬಗ್ಗೆ ದೆಹಲಿ ಸರ್ಕಾರದಿಂದ ತಾನು ಯಾವುದೇ ಸಹಾಯ ಬಯಸುವುದಿಲ್ಲ. ಆದಾಗ್ಯೂ, ದೆಹಲಿ ಪೊಲೀಸ್ ದೆಹಲಿ ಸರ್ಕಾರದ ಅಧೀನದಲ್ಲಿ ಬರುವುದಿಲ್ಲ ಎಂಬುದೇ ಖುಷಿಯ ವಿಚಾರ  ಎಂದು ಬಸ್ಸಿ ದೆಹಲಿ ಸರ್ಕಾರ ವಿರುದ್ಧ ಕಿಡಿ ಕಾರಿದ್ದಾರೆ. 
SCROLL FOR NEXT