ರಾಯ್ಪುರ: ಛತ್ತೀಸ್‍ಗಡ ಟೇಪ್ ಹಗರಣಕ್ಕೆ ಸಂಬಂಧಿಸಿ ಮಾಜಿ ಸಿಎಂ ಅಜಿತ್ ಜೋಗಿ ಕೆಂಡವಾಗಿದ್ದಾರೆ.
ತನ್ನ ಮಾನಹಾನಿ ಮಾಡಿದ ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷ ಭೂಪೇಶ್ ಬಘೇಲ್‍ರನ್ನು ಕಿತ್ತುಹಾಕಲು ಅನುಮತಿ ನೀಡುವಂತೆ ಕೋರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಜೋಗಿ ಪತ್ರ ಬರೆದಿದ್ದಾರೆ.
ಜತೆಗೆ, ನನ್ನ ವಿರುದ್ಧ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಸಂಚು ರೂಪಿಸಿ, ಇಂತಹ ಆರೋಪ ಮಾಡಿದ್ದಾರೆ. ಇದು ನನ್ನ ವ್ಯಕ್ತಿತ್ವಕ್ಕೆ ಮಸಿ ಬೆಳೆಯುವ ಯತ್ನ ಎಂದೂ ಹೇಳಿದ್ದಾರೆ.