ನಳಿನಿ ಚಿದರಂಬರಂ 
ದೇಶ

ಶಾರದಾ ಚಿಟ್ ಫಂಡ್ ಹಗರಣ: ಚಿದಂಬರಂ ಪತ್ನಿ ವಿರುದ್ಧ ಚಾರ್ಜ್ ಶೀಟ್

ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣ ಸಂಬಂಧ ಮಾಜಿ ಕೇಂದ್ರ ಸಚಿವ ಚಿದಂಬರಂ ಪತ್ನಿ, ನಳಿನಿ ಚಿದಂಬರಂ ಹೆಸರನ್ನು, ಸಿಬಿಐ ಚಾರ್ಜ್ ಶೀಟ್ ನಲ್ಲಿ ಸೇರಿಸಿದೆ.

ನವದೆಹಲಿ: ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣ ಸಂಬಂಧ ಮಾಜಿ ಕೇಂದ್ರ ಸಚಿವ ಚಿದಂಬರಂ ಪತ್ನಿ, ನಳಿನಿ ಚಿದಂಬರಂ ಹೆಸರನ್ನು, ಸಿಬಿಐ ಚಾರ್ಜ್ ಶೀಟ್  ನಲ್ಲಿ ಸೇರಿಸಿದೆ.

ಸಿಬಿಐ ತಂಡ ಸೋಮವಾರ ಸಿದ್ಧಪಡಿಸಿದ ಪೂರಕ ಚಾರ್ಜ್ ಶೀಟ್ ನಲ್ಲಿ ನಳಿನಿ ಚಿದಂಬರಂ ಅವರ ಹೆಸರು ಸೇರಿಸಿದ್ದು, ನಳಿನಿ ಅವರು ಪ್ರತ್ಯಕ್ಷವಾಗಿಯೋ, ಇಲ್ಲವೇ ಪರೋಕ್ಷವಾಗಿಯೋ ಶಾರದಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಿದೆ.

ಶಾರದಾ ಗ್ರೂಪ್ ನ ಮನೋರಂಜನ್ ಸಿನ್ಹಾ ಅವರಿಗೆ ನಳಿನಿ ಚಿದಂಬರಂ ವಕೀಲೆಯಾಗಿದ್ದರು. ಶಾರದಾ ಸ್ಕ್ಯಾಮ್ ನ ಹಣವನ್ನು ನಳಿನಿ ಚಿದಂಬರಂ ಅವರ ಲಾಯರ್ ಶುಲ್ಕವಾಗಿ ನೀಡಲಾಗಿದೆ ಎಂದು ಶಾರದಾ ಗ್ರೂಪ್ ನ ಅಧ್ಯಕ್ಷ ಸುದೀಪ್ತಾ ಸೇನ್ ಸಿಬಿಐ ಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಬ್ಯಾಂಕ್ ನ ಮಾಹಿತಿ ಪ್ರಕಾರ ನಳಿನಿ ಚಿದಂಬರಂ ಅವರಿಗೆ 2010 ಜೂನ್ ರಿಂದ 2021 ರ ಸೆಪ್ಟಂಬರ್ ವರೆಗೆ ಶಾರದಾ ಗ್ರೂಪ್ ಸುಮಾರು 65.85 ಲಕ್ಷ ರು. ಹಣವನ್ನು ಲಾಯರ್ ಶುಲ್ಕ ಎಂದು ಪಾವತಿಸಿದೆ ಎಂದು ಹೇಳಿದೆ.

ಆದರೆ ಟಿಡಿಎಸ್ ಫೈಲ್ ಮಾಡುವಾಗ ವಕೀಲೆ ನಳಿನಿ ಅವರಿಗೆ ಶಾರದ ಗ್ರೂಪ್ 1.5 ಕೋಟಿ ರು ಪಾವತಿಸಿದೆ ಎಂದು ತೋರಿಸಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ನಳಿನಿ ಚಿದಂಬರಂ ಅವರ ಹೆಸರನ್ನು ಚಾರ್ಜ್ ಶೀಟ್ ನಲ್ಲಿ ಸೇರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಮಹಾಲಯ ಅಮಾವಾಸ್ಯೆಯಂದು ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!