ನವದೆಹಲಿ: ಪಠಾಣ್ ಕೋಟ್ ದಾಳಿ ಮುಗಿಯುತ್ತಿದ್ದಂತೆ, ಇತ್ತ ದೆಹಲಿಯಲ್ಲಿ ಬಾಂಬ್ ಬೆದರಿಕೆ ಕರೆಯೊಂದು ಕೆಲ ಕಾಲ ಆತಂಕದ ಕ್ಷಣ ಸೃಷ್ಟಿಸಿತ್ತು.
ಸಂಸತ್ ಭವನಕ್ಕೆ ಬಾಂಬ್ ಇಡಲಾಗಿದೆ ಎಂಬ ಕರೆಯನ್ನು ಆಧರಿಸಿ, ಬಾಂಬ್ ನಿಷ್ಕ್ರಿಯ ದಳಗಳೂ ಸೇರಿದಂತೆ ಪೊಲೀಸ್ ಪಡೆಗಳು ಧಾವಿಸಿ ಪರಿಶೀಲನೆ ನಡೆಸಿವೆ. ಸಂಜೆ 6.12ರ ವೇಳೆಗೆ ಫೈರ್ ವಿಭಾಗಕ್ಕೆ ಈ ಕರೆ ಬಂದಿದೆ.
ಇವರ ಮಾಹಿತಿ ಮೇರೆಗೆ ಬಾಂಬ್‍ಗಾಗಿ ಶೋಧ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಆದರೆ ಕಡೆಗೆ ಇದೊಂದು ಹುಸಿ ಕರೆ ಎಂಬುದು ಗೊತ್ತಾಗಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.