ದೇಶ

ಉತ್ತರ, ಈಶಾನ್ಯ ಭಾರತದಲ್ಲಿ ಪ್ರಬಲ ಭೂಕಂಪದ ಎಚ್ಚರಿಕೆ ನೀಡಿದ ಗೃಹ ಇಲಾಖೆ

Lingaraj Badiger
ನವದೆಹಲಿ: ಉತ್ತರ ಹಾಗೂ ಈಶಾನ್ಯ ಭಾರತದಲ್ಲಿ ಪ್ರಬಲ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ನೈಸರ್ಗಿಕ ಪ್ರಕೋಪ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಿಮಾಲಯ ಸೇರಿದಂತೆ ಉತ್ತರ ಭಾರತ ಹಾಗೂ ಈಶಾನ್ಯ ರಾಜ್ಯಗಳಲ್ಲಿ ರಿಕ್ಟರ್ ಮಾಪಕದಲ್ಲಿ 8.0ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ಗೃಹ ಸಚಿವಾಲಯದ ನೈಸರ್ಗಿಕ ಪ್ರಕೋಪ ತಜ್ಞರು ಎಚ್ಚರಿಸಿರುವುದಾಗಿ ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.
ಕಳೆದ ಸೋಮವಾರ ಮಣಿಪುರದಲ್ಲಿ 6.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಭವಿಷ್ಯದಲ್ಲಿ ಇನ್ನೂ ತೀವ್ರತಮ ಭೂಕಂಪ ಸಂಭವಿಸುವ ಸೂಚನೆಯನ್ನು ನೀಡಿದೆ. ಇಡೀ ಉತ್ತರ ಹಾಗೂ ಈಶಾನ್ಯ ಭಾರತದಲ್ಲಿ 8 ರಷ್ಟು ತೀವ್ರತೆಯ ಭೂಕಂಪವು ಸದ್ಯದಲ್ಲೇ ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
2016ರ ಜನವರಿಯಲ್ಲಿ ಸಂಭವಿಸಿರುವ ಮಣಿಪುರ ಭೂಕಂಪ (6.7 ಅಂಕಗಳ ತೀವ್ರತೆ), ನೇಪಾಲ ಭೂಕಂಪ (2015 ಮೇ - 7.3 ಅಂಕ) ಮತ್ತು ಸಿಕ್ಕಿಂ ಭೂಕಂಪ (2011 - 6.9 ತೀವ್ರತೆ)ದಿಂದಾಗಿ ಹಿಮಾಲಯನ್‌ ಪ್ರಾಂತ್ಯದಲ್ಲಿ ನ ಭೂಗರ್ಭದಲ್ಲಿ ಟೆಕ್ಟಾನಿಕ್‌ ಪ್ಲೇಟ್‌ಗಳ ಘರ್ಷಣೆ ತೀವ್ರಗೊಂಡಿದೆ ಎಂದು ವರದಿ ತಿಳಿಸಿದೆ.
ಒಂದೊಮ್ಮೆ 8ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದೇ ಆದರೆ ಬಹುದೊಡ್ಡ ಪ್ರಮಾಣದ ಜೀವ ಹಾನಿ ಹಾಗೂ ನಷ್ಟ ಸಂಭವಿಸಲಿದೆ ಎಂದು ವರದಿ ಎಚ್ಚರಿಸಿದೆ. 
SCROLL FOR NEXT