ಧಾರವಾಡ: ಕಳಸಾ-ಬಂಡೂರಿ ಸಮಸ್ಯೆ ಬಗೆಹರಿಸಲು ಎಲ್ಲ ರೀತಿಯ ನೆರವು ನೀಡಲು ಸಿದ್ಧ ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಭರವಸೆ ನೀಡಿದ್ದಾರೆ.
ನಗರದ ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಸಂಸ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆ, ಲಯನ್ಸ್ ಕ್ಲಬ್ ಹುಬ್ಬಳ್ಳಿ ವತಿಯಿಂದ ಬುಧವಾರ ಡಾ. ವೀರೇಂದ್ರ ಹೆಗ್ಗಡೆ ಅವರ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆಗೊಳಿಸಿ ಮಾತನಾಡಿದರು. ಹಲವು ದಶಕಗಳಿಂದ ಕಳಸಾ-ಬಂಡೂರಿಗಾಗಿ ಇಲ್ಲಿನ ರೈತರು ಹೋರಾಡುತ್ತಿದ್ದಾರೆ. ಅವರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ನಾನೂ ಸಹಾಯ ಮಾಡುತ್ತೇನೆ. ನೀರಿನ ಬವಣೆ ನೀಗಿಸಲು ಕರ್ನಾಟಕದ ಮುಖ್ಯಮಂತ್ರಿಗಳು ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾದರೆ ನಾನೂ ನೆರವು ನೀಡುತ್ತೇನೆ ಎಂದು ಹೇಳಿದರು.
ದೇಶದ ಮೇಲೆ ಯಾರೇ ದಾಳಿ ಮಾಡಿದರೂ ಅದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಮನೋಹರ ಪರ್ರಿಕರ್ ಹೇಳಿದರು. ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ನಮ್ಮ ಯೋಧರು ತಮ್ಮ ಜೀವದ ಹಂಗು ತೊರೆದು ದೇಶವನ್ನು ರಕ್ಷಿಸಿದ್ದಾರೆ.
ವೀರಯೋಧರು ಇರುವುದರಿಂದಲೇ ದೇಶ ಸುರಕ್ಷಿತವಾಗಿದೆ. ದೇಶದ ವಿರುದ್ಧ ಯಾರೇ ಷಡ್ಯಂತ್ರ ನಡೆಸಿದರೂ ಅವರಿಗೆ ತಕಕ್ ಉತ್ತರ ನೀಡಲಾಗುವಲುದು. ಪಠಾಣ್ ಕೋಟ್ ನಲ್ಲಿ ದಾಳಿ ನಡೆಸುತ್ತಿರುವ ಭಯೋತ್ಪಾದಕರು ಜನರ ಪ್ರಾಣ ತೆಗೆಯಲೆಂದೇ ಗಡಿದಾಟಿ ಬಂದವರು ಎಂದರು.