ನವದೆಹಲಿ: ಪಠಾಣ್‌ಕೋಟ್ ದಾಳಿ ಪ್ರಕರಣದ ತನಿಖೆ ಮುಂದುವರಿದಿದ್ದು, ಈ ದಾಳಿಯಲ್ಲಿ ಪಾಕಿಸ್ತಾನದ ಉಗ್ರರ ಕೈವಾಡವಿದೆ ಎಂಬ ಮಾಹಿತಿ ಲಭಿಸಿದೆ.
ಸುದ್ದಿಸಂಸ್ಥೆಯೊಂದರ ವರದಿ ಪ್ರಕಾರ ಅಸ್‌ಫಾಕ್ ಅಹ್ಮದ್, ಹಫೀಜ್ ಅಬ್ದುಲ್ ಶಕೂರ್, ಕಾಶಿಂ ಜಾನ್ ಮತ್ತು ಮಸೂದ್ ಅಜರ್ ಎಂಬ 6 ಮಂದಿ ಪಾಕ್ ಉಗ್ರರು ಈ ದಾಳಿಯ ರೂವಾರಿಗಳಾಗಿದ್ದಾರೆ.
ಈ ದಾಳಿಯ ರೂಪುರೇಷೆಗಳನ್ನು ಪಾಕಿಸ್ತಾನದ ಮರ್ಕಾಜ್‌ನಲ್ಲಿ ಹೆಣೆಯಲಾಗಿದೆ ಎಂದು ಸುದ್ದಿ ಸಂಸ್ಥೆ ಹೇಳಿದೆ.
ಶನಿವಾರ ಮುಂಜಾನೆ ಉಗ್ರರು ಪಠಾಣ್‌ಕೋಟ್ ವಾಯುನೆಲೆ ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ 6 ಉಗ್ರರು ಹತರಾಗಿದ್ದು, 7 ಯೋಧರು ಹುತಾತ್ಮರಾಗಿದ್ದಾರೆ.