ದೇಶ

ಪ್ರೇಮ್ ಜಿ 27 ಸಾವಿರ ಕೋಟಿ ರು. ದಾನ

Vishwanath S

ನವದೆಹಲಿ: ಸಮಾಜಸೇವಾ ಕಾರ್ಯಗಳಿಗೆ ಅತಿ ಹೆಚ್ಚು ಹಣ ನೀಡುವ ದೇಶದ ಉದ್ಯಮಿಗಳಲ್ಲಿ ವಿಫ್ರೋ ಕಂಪನಿಯ ಸಂಸ್ಥಾಪಕ ಅಜೀಂ ಪ್ರೇಮ್ ಜಿ ಅಗ್ರ ಸ್ಥಾನದಲ್ಲಿದ್ದಾರೆ.

ಹರುಣ್ ಇಂಡಿಯಾ ಸಂಸ್ಥೆ 2015ರ ಪಟ್ಟಿ ಬಿಡುಗಡೆ ಮಾಡಿದ್ದು ಪ್ರೇಮ್ ಜಿ ರು.27,514 ಕೋಟಿ ನೀಡಿದ್ದಾರೆ. ದೇಶದ ಎಂಟು ರಾಜ್ಯಗಳಲ್ಲಿ 3.50 ಲಕ್ಷ ಶಾಲೆಗಳನ್ನು ನಡೆಸುತ್ತಿದ್ದಾರೆ. ಪ್ರೇಮ್ ಜಿ ಕಳೆದ ಮೂರು ವರ್ಷಗಳಿಂದಲೂ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್ ನಿಲೇಕಣಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ನಿಲೇಕಣಿ ರು,2404 ಕೋಟಿ ದಾನ ಮಾಡಿದ್ದಾರೆ. ಇನ್ಫೋಸಿಸ್ ನ ಮತ್ತೊಬ್ಬ ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ರು. 1,322 ಕೋಟಿ ನೀಡಿದ್ದು ಮೂರನೇ ಸ್ಥಾನದಲ್ಲಿದ್ದಾರೆ.

ಇನ್ಫೋಸಿಸ್ ನಿಂದ 2011 ರಲ್ಲಿ ನಿವೃತ್ತರಾದ ಕೆ.ದಿನೇಶ್ ರು. 1,238 ಕೋಟಿ ಕೊಡುಗೆ ನೀಡುವ ಮೂಲಕ ನಾಲ್ಕನೆ ಸ್ಥಾನದಲ್ಲಿದ್ದರೆ, ಎಚ್ ಸಿಎಲ್ ಕಂಪನಿ ಶಿವನಾಡರ್ ರು. 525 ಕೋಟಿ ಮತ್ತು ಮುಖೇಶ್ ಅಂಬಾನಿ ರು. 345 ಕೋಟಿ ನೀಡುವ ಮೂಲಕ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ಕಾರ್ಪೋರೇಟ್ ಕಂಪನಿಗಳ ಗಳಿಕೆಯಲ್ಲಿ ಇಳಿಮುಖ ಕಂಡಿದ್ದರೂ ಉದ್ಯಮಿಗಳ ಸಂಪತ್ತು ಏರಿಕೆ ಕಂಡಿದೆ ಎಂದು ಹರುನ್ ರಿಪೋರ್ಟ್ ಇಂಡಿಯಾ ಮುಖ್ಯಸ್ಥ ಅನಾಸ್ ರಹಮಾನ್ ಜುನೇದ್ ಹೇಳಿದ್ದಾರೆ.

SCROLL FOR NEXT